ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳು ಹಾಗೂ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಪ್ರತ್ಯುತ್ತರ ನೀಡಿದೆ. ಭಾರತದ ಈ ದಾಳಿಗೆ ಬೆಚ್ಚಿರುವ ನಾಗರಿಕರು ಅಲ್ಲಿನ ಮದರಸಾಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ʻಆಪರೇಷನ್ ಸಿಂಧೂರʼ ಬಳಿಕ ಪಾಕ್ ನಾಗರಿಕರು ಹಾಗೂ ವಿದ್ಯಾರ್ಥಿಗಳು ಅಲ್ಲಿನ ಮದರಸಾಗಳ ಮೇಲೆ ಕಲ್ಲು ತೂರಾಟ ನಡೆಸಿರುವ ವೀಡಿಯೊವೊಂದು ವೈರಲ್ ಆಗಿದೆ. ಮದರಸಾಗಳಲ್ಲಿ ಭಯೋತ್ಪಾದನೆಯ ಪಾಠ ಬೋಧಿಸಲಾಗುತ್ತಿದೆ, ಕೂಡಲೇ ಇಂತಹ ಮದರಸಾಗಳನ್ನು ಬಂದ್ ಮಾಡುವಂತೆಯೂ ಆಗ್ರಹಿಸು ತ್ತಿದ್ದಾರೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಗುಹೆರ್ಬಾದ್ ಜಿಲ್ಲೆಯ ಸರ್ಕಾರಿ ಬಾಲಕರ ಫ್ರೌಡಶಾಲೆ ಮೇಲೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರೂ ಸೇರಿದಂತೆ ಎಲ್ಲಾ ನಾಗರಿಕರು ಕಲ್ಲು ತೂರಾಟ ನಡೆಸಿರುವ ಮೂವತ್ತೊಂದು ನಿಮಿಷಗಳ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನದಲ್ಲಿ ಆಂತರಿಕ ದಂಗೆ ಶುರುವಾದಂತೆ ಕಾಣಿಸುತ್ತಿದೆ, ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಹೋರಾಟ ನಡೆಸು ತ್ತಿದೆ. ತಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಕ್ಷಿಣ ವಜೀರಿಸ್ತಾನದ ಮಿಲಿಟರಿ ಹೊರಠಾಣೆ ಮೇಲೆ ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ. ಮತ್ತೊಂದೆಡೆ ನಾಗರಿಕರು ಮದರಸಾಗಳ ವಿರುದ್ಧ ಸಿಡಿದೆದ್ದಿದ್ದಾರೆ.