ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಲಿಫ್ಟ್ ಸ್ಥಗಿತಗೊಂಡು ಆಸ್ಪತ್ರೆಯ 8 ಸಿಬ್ಬಂದಿ ಲಿಫ್ಟ್ ನಲ್ಲಿ ಸಿಲುಕಿ ಪರದಾಡುವಂತಾಗಿ, ಸ್ಥಳದಲ್ಲಿದ್ದವರಲ್ಲಿ ಆತಂಕ ಸೃಷ್ಟಿಸಿತ್ತು. ಒಂದು ಗಂಟೆಗೂ ಹೆಚ್ಚು ಸಮಯ ಸಿಬ್ಬಂ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದು, ಲಿಫ್ಟ್ ಗೋಡೆ ಒಡೆದ ಬಳಿಕ ಹೊರಬಂದಿದ್ದಾರೆ. ಗಂಟೆಗೂ ಹೆಚ್ಚು ಕಾಲ ಸಿಲುಕಿದ್ದರಿಂದ ಸಿಬ್ಬಂದಿ ಗಾಬರಿಗೊಂಡಿದ್ದರು.
ತಾಂತ್ರಿಕ ದೋಷದಿಂದ ಲಿಫ್ಟ್ ಮೂರನೇ ಫ್ಲೋರ್ ಗೆ ಹೋಗ್ತಿದ್ದಂತೆ ಕೆಟ್ಟು ನಿಂತು ಅದರೊಳಗೆ ಸಿಲುಕಿದ್ದ ಸಿಬ್ಬಂದಿಯ ಬಗ್ಗೆ ಆತಂಕ ಸೃಷ್ಟಿಸಿತ್ತು. ಲಿಫ್ಟ್ ಗೋಡೆ ಒಡೆದು ಎಲ್ಲರನ್ನೂ ಸುರಕ್ಷಿತವಾಗಿ ಹೊರ ತರಲಾಗಿದೆ. ಜಿಮ್ಸ್ ನಾನಾ ಸಮಸ್ಯೆಗಳ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಿದ್ದು, ಈಗ ಲಿಫ್ಟ್ ನಿರ್ವಹಣೆಯ ವಿಚಾರದಲ್ಲೂ ಟೀಕೆಗೆ ಗ್ರಾಸವಾಗಿದೆ.