ನವದೆಹಲಿ: 2025ನೇ ಸಾಲಿನ ಸಿಬಿಎಸ್ ಸಿ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.88.39ರಷ್ಟು ಫಲಿತಾಂಶ ಹೊರಬಂದಿದೆ.
ಮಂಗಳವಾರ ಬೆಳಿಗ್ಗೆ ಫಲಿತಾಂಶ ಪ್ರಕಟವಾಗಿದ್ದು, ಶೇ.5ರಷ್ಟು ಅಂಕದಿಂದ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜಯವಾಡ ಶೇ.99.60 ಫಲಿತಾಂಶದೊಂದಿಗೆ ಇಡೀ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ.
ಸಿಬಿಎಸ್ ಇಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾದರೆ ಕನಿಷ್ಠ ಶೇ.33ರಷ್ಟು ಫಲಿತಾಂಶ ಪಡೆಯಬೇಕಾಗಿದೆ. ಕೇವಲ 1 ಮತ್ತು 2 ಅಂಕದಿಂದ ಫೇಲಾದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡುವ ಮೂಲಕ ಪಾಸ್ ಮಾಡಲಾಗುವುದು ಎಂದು ಸಿಬಿಎಸ್ ಇ ಪ್ರಕಟಣೆಯಲ್ಲಿ ತಿಳಿಸಿದೆ.
1.15 ಲಕ್ಷ ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಪಡೆದು ಪಾಸಾಗಿದ್ದಾರೆ. 24,000 ವಿದ್ಯಾರ್ಥಿಗಳು ಶೇ.95ಕ್ಕಿಂತ ಅಧಿಕ ಅಂಕ ಪಡೆದು ಉತೀರ್ಣರಾಗಿದ್ದಾರೆ. ಈ ಬಾರಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ವೀಕ್ಷಿಸಲು cbse.nic.in ವೆಬ್ ಸೈಟ್ ಗೆ ಭೇಟಿ ನೀಡಿ. ನಂತರ CBSE Class 10 Result 2025 ಲಿಂಕ್ ಕ್ಲಿಕ್ ಮಾಡಿ.
ನಂತರ ನಿಮ್ಮ ಕ್ರಮಸಂಖ್ಯೆ, ಶಾಲೆಯ ವಿವರ, ಗುರುತು ಚೀಟಿ, ಜನ್ಮ ದಿನಾಂಕ, ಭದ್ರತಾ ಸಂಖ್ಯೆ ನಮೂದಿಸಿ ಫಲಿತಾಂಶ ವಿವರ ನೋಡಬಹುದು.