Menu

ಸೈಬರ್ ದಾಳಿಗಳ ಬಗ್ಗೆ ನಾಗರಿಕರು ಎಚ್ಚರ ವಹಿಸಿ: ಪೊಲೀಸ್ ಕಮಿಷನರ್ ಬಿ. ದಯಾನಂದ್

ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೈಬರ್ ದಾಳಿಗಳ ಸಾಧ್ಯತೆ ಬಗ್ಗೆ ನಾಗರಿಕರು ಎಚ್ಚರ ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ.

ಸೈಬರ್ ಅಪರಾಧಿಗಳು ನಕಲಿ ಲಿಂಕ್‌ಗಳು, ಇ-ಮೇಲ್‌ಗಳು, ಮತ್ತು ದುರುದ್ದೇಶಪೂರಿತ ಫೈಲ್‌ಗಳ ಮೂಲಕ ಡೇಟಾ ಕದಿಯಲು ಅಥವಾ ಸಾಧನಗಳನ್ನು ಹ್ಯಾಕ್ ಮಾಡಲು ಯತ್ನಿಸಬಹುದು, ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ವಿಶೇಷವಾಗಿ “ಎಕ್ಸ್‌ಕ್ಲೂಸಿವ್ ಇಂಡೋ-ಪಾಕ್ ಅಪ್‌ಡೇಟ್” ಎಂಬ ಹೆಸರಿನಲ್ಲಿ ಬರುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆಯಿಂದಿರಲು ಕಮಿಷನರ್ ಬಿ. ದಯಾನಂದ್ ತಿಳಿಸಿದ್ದಾರೆ. ಇದರಿಂದ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳು ಹ್ಯಾಕ್ ಆಗುವ ಸಾಧ್ಯತೆಯಿದೆ. ಪ್ರತಿಯೊಂದು ವಿಶೇಷ ಸುದ್ದಿಯ ಲಿಂಕ್ ಸುರಕ್ಷಿತವಲ್ಲ. ಇವುಗಳನ್ನು ಕ್ಲಿಕ್ ಮಾಡಬೇಡಿ, ಫಾರ್ವರ್ಡ್ ಮಾಡಬೇಡಿ, ಅಥವಾ ಡೌನ್‌ಲೋಡ್ ಮಾಡಬೇಡಿ ಎಂದು ಹೇಳಿದ್ದಾರೆ. ಯಾವುದೇ ಸೈಬರ್ ಅಪರಾಧದ ಸಂಶಯ ಉಂಟಾದರೆ, ತಕ್ಷಣ 1930 ಗೆ ಕರೆ ಮಾಡಿ ಸಹಾಯ ಪಡೆಯಲು ಸೂಚಿಸಿದ್ದಾರೆ. ಸೈಬರ್ ಅಪರಾಧಿಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಟೆಲಿಗ್ರಾಂ, ಮತ್ತು ಇ-ಮೇಲ್‌ಗಳ ಮೂಲಕ ತಮ್ಮ ದಾಳಿಗಳನ್ನು ತೀವ್ರಗೊಳಿಸಬಹುದು. ಆದ್ದರಿಂದ ವಾಟ್ಸಾಪ್ ಮತ್ತು ಇತರ ಆಪ್‌ಗಳ ಸೆಕ್ಯೂರಿಟಿ ಅಪ್‌ಡೇಟ್‌ ಗಳನ್ನು ನಿಯಮಿತವಾಗಿ ಮಾಡಿಕೊಳ್ಳುವಂತೆ  ತಿಳಿಸಿದ್ದಾರೆ.

ವ್ಯಾಪಾರಿ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಮತ್ತು ಶೈಕ್ಷಣಿಕ ಸಂಸ್ಥೆಗಳೂ ಸೈಬರ್ ದಾಳಿಗಳ ಗುರಿಯಾಗಬಹುದು. ಎಲ್ಲರೂ ತಮ್ಮ ಡಿಜಿಟಲ್ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *