ತಾನು ವಿಧಿಸಿರುವ ಷರತ್ತು ಉಲ್ಲಂಘಿಸಿದ್ದಕ್ಕೆ ಚೀನಾವು ಪಾಕಿಸ್ತಾನಕ್ಕೆ ಸಮನ್ಸ್ ನೀಡಿದೆ ಎಂದು ಸುದ್ದಿಯಾಗಿದೆ, ತಾನು ಪೂರೈಸಿರುವ ಪಿಎಸ್15 ಕ್ಷಿಪಣಿ, ಜೆ17 ಫೈಟರ್ ಜೆಟ್‌ಗಳನ್ನು ಯುದ್ಧಕ್ಕೆ ಬಳಸಬಾರದು ಎನ್ನುವ ಷರತ್ತನ್ನು ಹಾಕಿದ್ದರೂ ಚೀನಾ ಅದನ್ನು ಉಲ್ಲಂಘಿಸಿದೆ ಎಂಬುದೇ ಚೀನಾದ ಸಿಟ್ಟಿಗೆ ಕಾರಣ ಎಂದು ಹೇಳಲಾಗಿದೆ. ಮತ್ತೊಂದೆಡೆ ಎಫ್-16 ವಿಮಾನ ಬಳಕೆಯಲ್ಲಿಯೂ ಪಾಕ್ ಅಮೆರಿಕದ ನಿಯಮ ಉಲ್ಲಂಘಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಪಾಕಿಸ್ತಾನ ಹಾರಿಸಿಬಿಟ್ಟ ಪಿಎಸ್15 ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿತ್ತು. ಜೆ17 ಯುದ್ಧ ವಿಮಾನಗಳು, ಪಿಎಲ್15 ಕ್ಷಿಪಣಿಗಳು, ಜೆ 17 ವಿಮಾನಗಳನ್ನು ಕೂಡ ಹೊಡೆದುರುಳಿಸಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆ ಬಂಧಿದೆ. ಆಫ್ರಿಕಾ ದೇಶಗಳು ಈಗಾಗಲೇ ಮಾಡಿ ಕೊಂಡಿದ್ದ ಖರೀದಿ ಒಪ್ಪಂದದಿಂದ ಹಿಂದೆ ಸರಿಯಬಹುದು ಎಂಬ ಆತಂಕ ಎದುರಾಗಿರುವ ಕಾರಣ ಪಾಕ್‌ಗೆ ಚೀನಾ ಸಮ್ಸನ್ ನೀಡಿದೆ ಎನ್ನಲಾಗಿದೆ.
ಭಾರತದ ವಿರುದ್ಧ ಎಫ್ 16 ವಿಮಾನ ಬಳಕೆ ಮೂಲಕ ಅಮೆರಿಕದ ಪೂರೈಕೆ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ, ವಿಮಾನವನ್ನು ಉಗ್ರರ ವಿರುದ್ಧ ಮಾತ್ರ ಬಳಸಬೇಕು, ತಾನು ಎಫ್ 16 ಪೂರೈಸಿರುವ ಮತ್ತೊಂದು ದೇಶದ ವಿರುದ್ಧ ಅದನ್ನು ಬಳಸಬಾರದು, ಅನಿವಾರ್ಯವಾಗಿ ಬಳಸುವುದೇ ಪೂರ್ವಾನುಮತಿ ಪಡೆಯ ಬೇಕು ಎಂದು ಅಮೆರಿಕ ಷರತ್ತನ್ನು ವಿಧಿಸಿತ್ತು. ಆದರೆ ಪಾಕಿಸ್ತಾನ ಅವೆಲ್ಲವನ್ನು ಉಲ್ಲಂಘಿಸಿರುವುದು ಅಮೆರಿಕವನ್ನು ಸಿಟ್ಟಿಗೆಬ್ಬಿಸಿದೆ ಎಂದು ಹೇಳಲಾಗಿದೆ.