ನವದೆಹಲಿ: ಪಾಕಿಸ್ತಾನ ಸೇನೆ ಉತ್ತರ ಮತ್ತು ಈಶಾನ್ಯ ಭಾರತದ 15 ನಗರಗಳ ಮೇಲೆ ಡ್ರೋಣ್ ಮತ್ತು ಕ್ಷಿಪಣಿ ದಾಳಿ ನಡೆಸುವ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ ಬುಧವಾರ ರಾತ್ರಿ 15 ನಗರಗಳ ಮೇಲೆ ಶೆಲ್, ಡ್ರೋಣ್ ಹಾಗೂ ಕ್ಷಿಪಣಿಗಳ ದಾಳಿಗೆ ಯತ್ನಿಸಿದೆ.
ಭಾರತೀಯ ಸೇನೆ ಗುರುವಾರ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಎಸ್-400 ಡಿಫೆನ್ಸ್ ಸಿಸ್ಟಮ್ ಮೂಲಕ ಪಾಕಿಸ್ತಾನದ ದಾಳಿ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ತಿಳಿಸಿದೆ.
ಭಾರತದ ಅವಂತಿಪುರ, ಶ್ರೀನಗರ, ಜಮ್ಮು, ಪಹಲ್ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲೂಧಿಯಾನ, ಅಧಂಪುರ್, ಬಟಿಂಡ, ಚಂಡೀಗಢ, ನಾಲ್, ಪಲ್ಗೋಡಿ, ಉತ್ತರಲೈ, ಮತ್ತು ಭುಜ್ ಸೇರಿದಂತೆ ಹಲವು ಕಡೆ ದಾಳಿ ಯತ್ನ ವಿಫಲಗೊಳಿಸಲಾಗಿದೆ ಎಂದು ಸೇನೆ ವಿವರಿಸಿದೆ.
ಇದೇ ವೇಳೆ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಪ್ರೋಚಿದಿತ ದಾಳಿ ಮುಂದುವರಿಸಿದ್ದು, ಕುಪ್ವಾರ, ಬಾರಮುಲ್ಲ, ಉರಿ, ಪೂಂಚ್, ಮೆಂಧರ್, ರಜೌರಿ ಅಲ್ಲದೇ ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.