Menu

ಕರ್ನಲ್‌ ಸೋಫಿಯಾ ಅಂದ್ರೆ ಕನ್ನಡಿಗರಿಗೆ ಪುಳಕ

ಭಾರತೀಯ ವಾಯುಪಡೆಯು ಆಪರೇಶನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ನಾಶಪಡಿಸಿದ ಯಶೋಗಾಥೆಯನ್ನು ಎಳೆ ಎಳೆಯಾಗಿ ಜಗತ್ತಿಗೆ ತೆರೆದಿಟ್ಟ ಲೆಪ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಶಿ ಬೆಳಗಾವಿಯ ಸೊಸೆ ಎಂಬುದು ಕನ್ನಡಿಗರ ಪುಳಕಕ್ಕೆ ಕಾರಣವಾಗಿದೆ.

ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ. ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಇವರದು. ಸೋಫಿಯಾ ಪತಿ ತಾಜುದ್ದೀನ್ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದವರು. ಭಾರತೀಯ ಸೇನೆಯಲ್ಲಿ ದಂಪತಿ ಉನ್ನತ ಕರ್ನಲ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಲ್ ಸೋಫಿಯಾ ಗುಜರಾತ್ ನ ಬರೋಡಾದವರು, ಬೆಳಗಾವಿಯ ತಾಜುದ್ದೀನ್‌ ಅವರನ್ನು 2015 ರಲ್ಲಿ ಪ್ರೇಮ ವಿವಾಹವಾದವರು. ತಾಜುದ್ದೀನ್ ಬಾಗೇವಾಡಿ ಕೂಡ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ‌ಸೋಫಿಯಾ ಜಮ್ಮುವಿನಲ್ಲಿ , ಪತಿ ತಾಜುದ್ದೀನಿ ಬಾಗೇವಾಡಿ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *