ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಎಂದು ಗುರುತಿಸಲಾಗಿರುವ ಉಗ್ರ ಶೇಖ್ ಸಜ್ಜದ್ ಗುಲ್/ ಸಜ್ಜದ್ ಅಹ್ಮದ್ ಶೇಖ್ ಗೆ ಕರ್ನಾಟಕ ಮತ್ತು ಕೇರಳದ ಲಿಂಕ್ ಇರುವುದು ಬಯಲಾಗಿದೆ.
ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ಹೆಸಿರನಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಪಹಲ್ಗಾಮ್ ದಾಳಿಯ ಹೊಣೆಯನ್ನು ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯ ಶಾಖೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಉಗ್ರ ಶೇಖ್ ಸಜ್ಜದ್ ಗುಲ್ ಈ ಸಂಘಟನೆಯಲ್ಲಿ ಭಾಗಿಯಾಗುವ ಮೊದಲು ಕರ್ನಾಟಕ ಮತ್ತು ಕೇರಳದಲ್ಲಿ ಅಧ್ಯಯನ ಮಾಡಿದ್ದ ಎನ್ನಲಾಗಿದೆ.
ಉಗ್ರ ಗುಲ್ ಪಾಕಿಸ್ತಾನದ ರಾವಲ್ಪಿಂಡಿಯ ಎಲ್‌ಇಟಿ ಸಂಘಟನೆಯ ರಕ್ಷಣೆಯಲ್ಲಿ ಅಡಗಿಕೊಂಡಿದ್ದಾನೆ, ಹಿಂದೆ ನಡೆದ ದೇಶದಲ್ಲಿ ನಡೆದ ಹಲವು ಉಗ್ರ ಚಟುವಟಿಕೆಗಳಲ್ಲಿ ಗುಲ್ ಭಾಗಿಯಾಗಿದ್ದನು. ಕಳೆದ ಐದು ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಉಗ್ರ ಶೇಖ್ ಸಜ್ಜದ್ ಗುಲ್ ಸಂಬಂಧ ಹೊಂದಿದ್ದಾನೆ ಎಂದು ವರದಿಯಾಗಿದೆ.
ಗುಲ್ ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆ. ಪಂಜಾಬಿ ನೇತೃತ್ವದ ಎಲ್‌ಇಟಿಗೆ ಕಾರ್ಯ ನಿರ್ವಹಿಸುತ್ತಿದ್ದಾನೆ. ಶ್ರೀನಗರದಲ್ಲಿ ಶಿಕ್ಷಣ ಪಡೆದಿರುವ ಗುಲ್, ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದಿದ್ದ. ಬಳಿಕ ಕೇರಳದಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಪೂರ್ಣಗೊಳಿಸಿ ಕಾಶ್ಮೀರಕ್ಕೆ ಹಿಂದಿರುಗಿದ್ದ. ಕಾಶ್ಮೀರಕ್ಕೆ ತೆರಳಿದ ಬಳಿಕ ಗುಲ್ ಸ್ವಂತ ಲ್ಯಾಬ್ ಆರಂಭಿಸಿ ಭಯೋತ್ಪಾದಕ ಗುಂಪಿಗೆ ಲಾಜಿಸ್ಟಿಕಲ್ ಬೆಂಬಲ ಒದಗಿಸುತ್ತಿದ್ದನು.
ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ 5 ಕೆಜಿ ಆರ್‌ಡಿಎಕ್ಸ್ ಜೊತೆಯಲ್ಲಿ ಗುಲ್‌ನನ್ನು ದೆಹಲಿ ಪೊಲೀಸರ ವಿಶೇಷ ದಳ ಆತನನ್ನು ಬಂಧಿಸಿತ್ತು. 10 ವರ್ಷ ಜೈಲು ಶಿಕ್ಷೆ ಅನುಭವಿಸಿ 2017ರಲ್ಲಿ ಬಿಡುಗಡೆಯಾಗಿದ್ದನು. ಜೈಲಿನಿಂದ ಹೊರ ಬಂದ ಆತ ಪಾಕಿಸ್ತಾನಕ್ಕೆ ತೆರಳಿ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದಾನೆ. ಕುಟುಂಬದ ಸದಸ್ಯರು ಕೂಡ ಭಯೋತ್ಪಾದಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದೆ. ಗುಲ್ ಸೋದರ ವೈದ್ಯನಾಗಿದ್ದರೂ, ಉಗ್ರಗಾಮಿ. ಗಲ್ಫ್ ರಾಷ್ಟ್ರದಲ್ಲಿರುವ ಈತ ಭಯೋ ತ್ಪಾದನೆ ಸಂಘಟನೆಗಳಿಗೆ ಹಣಕಾಸು ಒದಗಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಎಂದು ಹೇಳಲಾಗುತ್ತಿದೆ.