ಪಹಲ್ಗಾಂವ್ ನಲ್ಲಿ ಉಗ್ರರ ದಾಳಿಯ ನಂತರ ಪಾಕಿಸ್ತಾನದ ವಿಮಾನಗಳು ಭಾರತದ ವಾಯು ಪ್ರದೇಶ ಪ್ರವೇಶಿಸುವುದನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ದಾಳಿಯ ಬಳಿಕ ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಹಲವು ಕ್ರಮ ಕೈಗೊಳ್ಳಲು ಮುಂದಾಗಿರುವ ಭಾರತ ಇದೀಗ ಭಾರತದ ವಾಯು ಪ್ರದೇಶ ನಿರ್ಬಂಧಿಸುವ ತೀರ್ಮಾನವನ್ನು ಕಾರ್ಯಗತಗೊಳಿಸಿದೆ. ಪಾಕಿಸ್ತಾನ ಭಾರತದ ವಿಮಾನಗಳಿಗೆ ವಾಯು ಪ್ರದೇಶ ಬಳಕೆ ನಿಷೇಧಿಸಿದ 6 ದಿನಗಳ ನಂತರ ಭಾರತ ಸರ್ಕಾರ ಈ ತಿರುಗೇಟು ನೀಡಿದೆ.
ಪಾಕಿಸ್ತಾನವು ಭಾರತದ ವಿಮಾನಗಳಿಗೆ ವಾಯು ಪ್ರದೇಶ ಬಳಕೆ ನಿಷೇಧಿಸಿದ್ದರಿಂದ ಭಾರತದ ವಿಮಾನಗಳ ವೆಚ್ಚ ಹೆಚ್ಚಳವಾಗಿದ್ದು, ಇದರಿಂದ ಪ್ರಯಾಣ ದರದಲ್ಲಿ ಏರಿಕೆ ಮಾಡಲಾಗಿದೆ. ಮೋದಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಗೆ ಪರಮಾಧಿಕಾರ ನೀಡಲಾಗಿದೆ.