ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಹ್ಯಾಟ್ರಿಕ್ ಸೇರಿದಂತೆ ಒಂದೇ ಓವರ್ ನಲ್ಲಿ ಗಳಿಸಿದ 4 ವಿಕೆಟ್ ಸಹಾಯದಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 190 ರನ್ ಗೆ ಆಲೌಟ್ ಮಾಡಿದೆ,
ಚೆನ್ನೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸ್ಯಾಮ್ ಕರನ್ ಸಿಡಿಲಬ್ಬರದ ಅರ್ಧಶತಕದ ಸಹಾಯದಿಂದ ಬೃಹತ್ ಮೊತ್ತ ಸಾಗಿತ್ತು. ಆದರೆ 18ನೇ ಓವರ್ ನಲ್ಲಿ ಚಾಹಲ್ ಮಾರಕ ದಾಳಿಗೆ ತತ್ತರಿಸಿ 19.2 190 ರನ್ ಗೆ ಆಲೌಟಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹ್ಯಾಟ್ರಿಕ್ ಸಾಧಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಗೆ ಪಾತ್ರರಾದ ಚಾಹಲ್ ಗೆ ಇದು ಒಟ್ಟಾರೆ 2ನೇ ಐಪಿಎಲ್ ಹ್ಯಾಟ್ರಿಕ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಒಂದೆಡೆ ಸತತವಾಗಿ ವಿಕೆಟ್ ಕಳೆದುಕೊಂಡರೂ ಸ್ಯಾಮ್ ಕರನ್ 47 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 88 ರನ್ ಬಾರಿಸಿ ತಂಡವನ್ನು ಆಧರಿಸಿತು. ಡೆವಾಲ್ಡ್ ಬ್ರೇವಿಸ್ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 32 ರನ್ ಬಾರಿಸಿ ಉತ್ತಮ ಬೆಂಬಲ ನೀಡಿದರು.
ಚಾಹಲ್ 4 ವಿಕೆಟ್ ಪಡೆದು ಮಿಂಚಿದರೆ, ಅರ್ಷದೀಪ್ ಸಿಂಗ್ ಮತ್ತು ಮಾರ್ಕೊ ಜಾನ್ಸೆನ್ ತಲಾ 2 ವಿಕೆಟ್ ಪಡೆದು ಪರಿಣಾಮಕಾರಿ ದಾಳಿ ನಡೆಸಿದರು.