ಇಸ್ಲಮಾಬಾದ್: ಭಾರತ ಸೇನೆ 24 ರಿಂದ 36 ಗಂಟೆಯೊಳಗಾಗಿ ಪಾಕಿಸ್ತಾನ ಗುರಿಯಾಗಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅತಾವುಲ್ಲಾ ಟರಾರ್ ತಿಳಿಸಿದ್ದಾರೆ.
ಭಾರತದಲ್ಲಿನ ಬೆಳವಣಿಗೆಗಳ ಕುರಿತು ಅತ್ಯಂತ ಮಹತ್ವದ ಮಾಹಿತಿ ಸಂಗ್ರಹಿಸುವಲ್ಲಿ ಗುಪ್ತಚರ ಇಲಾಖೆ ಯಶಸ್ವಿಯಾಗಿದ್ದು, ಭಾರತ ದಾಳಿ ನಡೆಸಲು ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತ ಯಾವುದೇ ರೀತಿಯ ದಾಳಿ ನಡೆಸಲು ಮುಂದಾದರೆ ಅದಕ್ಕೆ ತಕ್ಕ ಪ್ರತಿಫಲ ಎದುರಿಸಲು ಸಜ್ಜಾಗಬೇಕು. ಪಹಲ್ಗಾಮ್ ನಲ್ಲಿ ನಡೆದ 26 ಪ್ರವಾಸಿಗರ ಹತ್ಯೆ ಘಟನೆಗೆ ಪಾಕಿಸ್ತಾನವನ್ನು ಯಾವುದೇ ಆಧಾರ ಇಲ್ಲದೇ ಆರೋಪ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಭಾರತದಲ್ಲಿ ಪ್ರವಾಸಿಗರ ಹತ್ಯೆ ಘಟನೆ ಕುರಿತು ಪಾಕಿಸ್ತಾನ ಪ್ರಮಾಣಿಕ ತನಿಖೆ ನಡೆಸಿ ವಾಸ್ತವಾಂಶ ತಿಳಿಯಲು ಪ್ರಯತ್ನಿಸಲಿದೆ. ಈ ಹತ್ಯೆ ಘಟನೆ ಹಿಂದೆ ಪಾಕಿಸ್ತಾನದ ಕೈವಾಡ ಇಲ್ಲ ಎಂಬುದು ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ಅವರು ಹೇಳಿದರು.