ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭದ್ರತಾ ದೃಷ್ಟಿಯಿಂದ 48 ಪ್ರವಾಸಿ ತಾಣಗಳನ್ನು ಬಂದ್ ಮಾಡಿದೆ.
ಕೇಂದ್ರಾಡಳಿತ ಪ್ರದೇಶದ ರೆಸಾರ್ಟ್ಗಳು, ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ. ಪಹಲ್ಗಾಮ್ನ ಸುಂದರವಾದ ಹುಲ್ಲುಗಾವಲುಗಳಲ್ಲಿ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಭದ್ರತಾ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ.
ನೈಸರ್ಗಿಕ ಸೊಬಗಿನ ತಾಣ ಸುಂದರ ಭೂದೃಶ್ಯಗಳ ಗುರೆಜ್ ಕಣಿವೆ ಸೇರಿದಂತೆ ಒಟ್ಟು 48 ತಾಣಗಳು ಪ್ರವಾಸಿಗರಿಗೆ ತಾತ್ಕಾಲಿಕ ಬಂದ್ ಮಾಡಲಾಗಿದೆ. ಪ್ರಶಾಂತ ಕಣಿವೆಗಳು ಮತ್ತು ಸುಂದರವಾದ ಪರ್ವತಗಳಿಗೆ ಹೆಸರುವಾಸಿಯಾದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಬುಡ್ಗಾಮ್ನ ದೂಧ್ಪತ್ರಿ ಮತ್ತು ಅನಂತ್ನಾಗ್ನ ವೆರಿನಾಗ್ನಂತಹ ಹಲವಾರು ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ನಿಷೇಧಿಸಲಾಗಿದೆ.
ಸ್ಥಳೀಯರಿಗೆ ಪ್ರಮುಖ ಆದಾಯದ ಮೂಲವಾದ ಕಾಶ್ಮೀರ ಪ್ರವಾಸೋದ್ಯಮದ ಬಗ್ಗೆ ಅನಿಶ್ಚಿತತೆಯ ಮಧ್ಯೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹತ್ಯಾಕಾಂಡದ ನಂತರ ಭಯಭೀತರಾದ ಪ್ರವಾಸಿಗರು ಕೇಂದ್ರಾಡಳಿತ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ, ಆದರೆ ಅನೇಕ ಪ್ರಯಾಣಿಕರು ತಮ್ಮ ಮುಂಬರುವ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ.