ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ಬರೆಯುತ್ತಿರುವ ಮಧ್ಯೆಯೇ ಚಿನ್ನದ ಗಣಿಗಾರಿಕೆ ನಡೆಸುವ ಅತಿದೊಡ್ಡ ಕಂಪನಿ ಯೊಂದು 10 ಗ್ರಾಂ ಚಿನ್ನದ ಬೆಲೆ 70,000 ರೂಪಾಯಿ ಆಗಲಿದೆ ಎಂದು ಹೇಳಿದೆ.
10 ಗ್ರಾಂ ಚಿನ್ನದ ಬೆಲೆ 27,000 ರೂ.ಗಳವರೆಗೆ ಕಡಿಮೆಯಾಗಲಿದೆ. ಸಾಲಿಡ್‌ಕೋರ್ ರಿಸೋರ್ಸಸ್ ಪಿಎಲ್‌ಸಿ ಖಜಕಿಸ್ತಾನ್‌ನ ಪ್ರಮುಖ ಚಿನ್ನದ ಗಣಿಗಾರಿಕೆ ಕಂಪನಿಯಾಗಿದೆ. ಈ ಕಂಪನಿಯ ಸಿಇಒ ವಿಟಾಲಿ ನೆಸಿಸ್ ಮುಂದಿನ 12 ತಿಂಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಾಣಬಹುದು ಎಂದು ವಿಶ್ಲೇಷಿಸಿದ್ದಾರೆ.
ಮುಂದಿನ 12 ತಿಂಗಳಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $2,500 ತಲುಪುವ ನಿರೀಕ್ಷೆಗಳಿವೆ. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಪ್ರತಿ ಔನ್ಸ್ ಬೆಲೆ 3,300 ಡಾಲರ್ ಆಗಿದೆ. ಈ ಬೆಳವಣಿಗೆ ಹೀಗೆಯೇ ಮುಂದುವರಿದೆ 12 ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 70,000 ರೂಪಾಯಿ ಆಗಲಿದೆ. ಪ್ರತಿ 10 ಗ್ರಾಂ ಚಿನ್ನ 27,000 ರೂ.ಗಳಷ್ಟು ಅಗ್ಗವಾಗಲಿದೆ. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $ 1,800-1,900 ಮಟ್ಟಕ್ಕೆ ಮತ್ತೆ ಹೋಗುವುದಿಲ್ಲ ಎಂದು ವಿಟಾಲಿ ನೆಸಿಸ್ ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕ ಕರೆನ್ಸಿ ಡಾಲರ್ ಮೌಲ್ಯ ಹೆಚ್ಚಳ, ಚೀನಾ-ಯುಎಸ್ ನಡುವಿನ ವ್ಯಾಪಾರ ಘರ್ಷಣೆ ಸೇರಿದಂತೆ ರ ಜಾಗತಿಕ ವಿಷಯಗಳು ನೇರವಾಗಿ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಡಾಲರ್ ಬಲಗೊಂಡಾಗ ಚಿನ್ನದ ಬೆಲೆ ಕುಸಿಯಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.