Menu

ಪಾಕ್‌ ಮೇಲೆ ಭಾರತ ದಾಳಿ ನಡೆಸಲು ಬಿಡುವುದಿಲ್ಲವೆಂದ ಖಲಿಸ್ತಾನಿ ಉಗ್ರ ಪನ್ನು

ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಪಾಕಿಸ್ತಾನಕ್ಕೆ ತನ್ನ ಬೆಂಬಲವನ್ನು ಪ್ರಕಟಿಸಿದ್ದಾನೆ. ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಬಿಡುವುದಿಲ್ಲ, ಪಾಕಿಸ್ತಾನದ ವಿರುದ್ಧ ಹೋರಾಡುವ ಧೈರ್ಯ ಭಾರತಕ್ಕೆ ಇಲ್ಲ ಎಂದು ಹೇಳಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋ ತ್ಪಾದಕ ದಾಳಿಯ ನಂತರ ಭಾರತ ತನ್ನ ಮೇಲೆ ದಾಳಿ ಮಾಡಬಹುದು ಎಂದು ಪಾಕಿಸ್ತಾನ ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾನೆ.

ಭಾರತೀಯ ಸೇನೆ ಪಂಜಾಬ್ ಮೂಲಕ ಹಾದುಹೋಗಲು ಮತ್ತು ಪಾಕಿಸ್ತಾನದ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ, 20 ಮಿಲಿಯನ್ ಸಿಖ್ಖರು ಪಾಕಿಸ್ತಾನದೊಂದಿಗೆ ಬಂಡೆಯಂತೆ ನಿಂತಿದ್ದೇವೆ. ಭಾರತದಲ್ಲಿ ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದಿದ್ದಾನೆ.

ಪಾಕಿಸ್ತಾನ ಎಂದಿಗೂ ಅವರಾಗಿಯೇ ದಾಳಿ ಮಾಡಲು ಬರುವುದಿಲ್ಲ, ಯಾರೇ ದಾಳಿ ಮಾಡಿದರೂ ಅವರಿಗೆ ಕೆಟ್ಟ ಅಂತ್ಯವಿರುತ್ತದೆ. ಅದು ಇಂದಿರಾ ಗಾಂಧಿ, ನರೇಂದ್ರ ಮೋದಿ ಅಥವಾ ಅಮಿತ್ ಶಾ ಆಗಿರಬಹುದು. ರಾಜಕೀಯ ಲಾಭಕ್ಕಾಗಿ ಭಾರತವು ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಕೊಂದಿದೆ ಎಂದು ಹೇಳಿದ್ದಾನೆ.
ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ, ಪಾಕಿಸ್ತಾನ ಮೂಲದ ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾದ ರೆಸಿಸ್ಟೆನ್ಸ್ ಫ್ರಂಟ್ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

Related Posts

Leave a Reply

Your email address will not be published. Required fields are marked *