Menu

ತವರಿನಲ್ಲಿ ಸೋಲಿನಲ್ಲೂ ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್

ms dhoni

ಚೆನ್ನೈ: ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಸತತ 5ನೇ ಬಾರಿ ತವರಿನಲ್ಲಿ ಸೋತು ಸೋಲಿನಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಚೆನ್ನೈನ ಚೆಪಾಕ್ ಕ್ರೀಡಾಂಗಣ ಸ್ಪಿನ್ನರ್ ಗಳ ಸ್ವರ್ಗವಾಗಿದ್ದು, ರನ್ ಗಳಿಸಲು ಬ್ಯಾಟ್ಸ್ ಮನ್ ಗಳು ಪರದಾಡುತ್ತಾರೆ. ಇಂತಹ ಪಿಚ್ ನ ಸಂಪೂರ್ಣ ಲಾಭ ಪಡೆಯುತ್ತಿದ್ದ ಧೋನಿ ನೇತೃತ್ವದ ಸಿಎಸ್ ಕೆ ತಂಡ ಎದುರಾಳಿಗಳನ್ನು ಮಣ್ಣು ಮುಕ್ಕಿಸುತ್ತಿತ್ತು.

ಆದರೀಗ, ಕಾಲ ಬದಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲೇ ಸತತ ಸೋಲುಗಳನ್ನು ಕಾಣುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಗಳಿಂದ ಸೋಲುಂಡ ಧೋನಿ ಪಡೆ ತವರಿನಲ್ಲಿ ಇದೇ ಮೊದಲ ಬಾರಿಗೆ ಸತತ 5 ಬಾರಿ ಸೋತ ದಾಖಲೆ ಬರೆದಿದೆ.

ಸಿಎಸ್ ಕೆ 13 ವರ್ಷಗಳ ನಂತರ ತವರಿನಲ್ಲಿ ಸತತ 4 ಪಂದ್ಯಗಳನ್ನು ಸೋತಿದೆ. ಧೋನಿ ಪಡೆಗೆ ತವರಿನಲ್ಲಿ ಮೊದಲ ಬಾರಿ ಸೋಲುಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳ ನಂತರ ಮೊದಲ ಬಾರಿ ಗೆದ್ದ ದಾಖಲೆ ಬರೆದಿತ್ತು. ನಂತರ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಎಸ್ ಆರ್ ಎಚ್ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಚೆನ್ನೈ ತಂಡವನ್ನು ಚೆನ್ನೈನಲ್ಲಿ ಸೋಲುಣಿಸಿದ ದಾಖಲೆ ಬರೆಯಿತು.

ಚೆನ್ನೈನಲ್ಲಿ ಕೆಕೆಆರ್ ವಿರುದ್ಧ 103 ರನ್ ದಾಖಲಿಸಿದ್ದು, ಐಪಿಎಲ್ ಇತಿಹಾಸದಲ್ಲೇ ತವರಿನಲ್ಲಿ ಕಳಪೆ ಮೊತ್ತ ದಾಖಲಿಸಿದ ದಾಖಲೆ ಬರೆದು ಸೋಲುಂಡಿತ್ತು.

ಮತ್ತೊಂದು ವಿಶೇಷ ಅಂದರೆ ಟಿ-20 ಕ್ರಿಕೆಟ್ ನಲ್ಲಿ ಧೋನಿ ಆಡಿದ 400ನೇ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಎಸ್ ಆರ್ ಎಚ್ ವಿರುದ್ಧ ಸೋತಿತು.

Related Posts

Leave a Reply

Your email address will not be published. Required fields are marked *