ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಆದೇಶದ ಮೇರೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಆತಂಕಗೊಂಡಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗಿದೆ.
ಪಹಲ್ಗಮ್ನಿಂದ ಸುಮಾರು 180 ಕನ್ನಡಿಗರನ್ನು ಸುರಕ್ಷಿತವಾಗಿ ಸಚಿವ ಸಂತೋಷ್ ಲಾಡ್ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಗುರುವಾರ ಮಧ್ಯಾಹ್ನ ವಾಪಸ್ ಕರೆದುಕೊಂಡು ಬಂದರು.
ಸಿಎಂ ಸೂಚನೆ ಮೇರೆಗೆ ಜಮ್ಮು ಕಾಶ್ಮೀರಕ್ಕೆ ಬುಧವಾರ ಬೆಳಗಿನ ಜಾವ 3.00 ಕ್ಕೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಸಚಿವ ಸಂತೋಷ್ ಲಾಡ್ ಉಗ್ರರ ದಾಳಿಯಿಂದ ಆತಂಕಗೊಂಡಿದ್ದ ಕನ್ನಡಿಗರನ್ನು ವಾಪಸ್ ಕರೆತಂದರು.
ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಕನ್ನಡಿಗರನ್ನು ಕರೆತಂದಿದ್ದು, ನಂತರ ಅವರು ತಮ್ಮ ತವರಿಗೆ ಮರಳಲಿದ್ದಾರೆ.
ಬುಧವಾರ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಅಸುನೀಗಿದ್ದರು.