Menu

ಐಸ್ ಕ್ರೀಮ್ ತಿನ್ನಲು ಹೋಗಿ ಉಳಿಸಿಕೊಂಡ ಜೀವ

ಬೆಂಗಳೂರು: ನಗರದ ನ್ಯೂ ತಿಪ್ಪಸಂದ್ರ ಬಡಾವಣೆಯ ನಿನ್ಯೂ ತಿಪ್ಪಸಂದ್ರ ಬಡಾವಣೆಯ ನಿವಾಸಿ ಸುಮನಾ ಭಟ್ ಅವರು ಐಸ್​ ಕ್ರೀಂ ತಿನ್ನಲು ಹೋಗಿದ್ದರಿಂದ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆಸಿದ ಉಗ್ರರ ದಾಳಿಯಲ್ಲಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಐಸ್​ ಕ್ರೀಂ ತಿನ್ನುವುದಕ್ಕೆಂದು ನಮ್ಮ ತಂಡ ನಿಂತಿದ್ದರಿಂದ ಪಹಲ್ಗಾಮ್​ ತಲುಪುವುದು ವಿಳಂಬವಾಯಿತು. ಅದರಿಂದಾಗಿ ಉಗ್ರರ ದಾಳಿಯಿಂದ ಬಚಾವಾದೆವು ಎಂದು ಅವರು ಹೇಳಿಕೊಂಡಿದ್ದಾರೆ. ಸುಮನಾ ಭಟ್ ಸೇರಿದಂತೆ ಟೈಮೆಕ್ಸ್ ಸಂಸ್ಥೆಯ 17 ಜನ ಉದ್ಯೋಗಿಗಳು ಜಮ್ಮುವಿಗೆ ಹೋಗಿ ಅಲ್ಲಿಂದ ನಿನ್ನೆ ಪಹಲ್ಗಾಮ್​ಗೆ ತೆರಳಿದ್ದರು. ಭಯೋತ್ಪಾದಕರ ದಾಳಿ ನಡೆದ ಸ್ಥಳವನ್ನು ನಮ್ಮ ಗೈಡ್ ಮಿನಿ ಸ್ವಿಜರ್ಲೆಂಡ್ ಎಂದು ಬಣ್ಣಿಸಿದ್ದರು ಎಂದು ಸುಮನಾ ಭಟ್ ಹೇಳಿದ್ದಾರೆ.

ಗೈಡ್​ಗಳು ನೀಡಿದ ಮಾಹಿತಿಯಿಂದ ಪಹಲ್​ಗಾಮ್ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಹೀಗಾಗಿ ನಾವೂ ಭಾರೀ ಕೌತುಕದಿಂದಲೇ ಕುದುರೆ ಮೇಲೆ ಅಲ್ಲಿಗೆ ಹೊರಟಿದ್ದೆವು. ನಾವು ಐಸ್‌ಕ್ರೀಂ ತಿನ್ನುತ್ತಾ ನಿಂತಿದ್ದರಿಂದ ನಮ್ಮೊಂದಿಗಿದ್ದ ಬೇರೆ ಪ್ರವಾಸಿಗರು ಮುಂದೆ ಹೋಗಿದ್ದರು. ಆ ಸ್ಥಳ ಇನ್ನೇನು ಮೂರು ಕಿಲೋ ಮೀಟರ್ ಇರುವಾಗ ಫೋಡಾವಾಲಾಗಳು ಕುದುರೆಯಿಂದ ನಮ್ಮನ್ನು ಇಳಿಸಿದರು.

ವಾಪಸ್ ಹೋಗುವಂತೆ ಹೇಳಿ ಅವರೆಲ್ಲ ಅಲ್ಲಿಂದ ಓಡಿಹೋದರು. ನಾವು ಜೀವ ಭಯದಲ್ಲೇ ಮೂರು ಕಿಲೋ ಮೀಟರ್ ನಡೆದುಕೊಂಡು ಪಹಲ್ಗಾಮ್​ನ ನಮ್ಮ ಹೋಟೆಲ್‌ಗೆ ಬಂದೆವು. ಅಲ್ಲಿ ಲಗೇಜ್ ತೆಗೆದುಕೊಂಡು ಭಾರತೀಯ ಸೇನೆಯ ವಾಹನಗಳಲ್ಲಿ ಜಮ್ಮುವಿಗೆ ಮರಳಿದೆವು ಎಂದು ಸುಮನಾ ಭಟ್ ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *