Menu

ಪಕ್ಷದ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

ಪಕ್ಷದ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಅಂತಹ ಯಾವುದೇ ವಿಚಾರ ಪಕ್ಷದ ಮುಂದೆ ಇಲ್ಲ ಮೈಸೂರಿನಲ್ಲಿ ಸಚಿವ ಸತೀಶ್ ಜಾರಕಿಹೋಳಿ ಸ್ಪಷ್ಟಪಡಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ಉಗ್ರರ ದಾಳಿ ಈ ಘಟನೆಯನ್ನು ನಾವು ಕೂಡ ಖಂಡಿಸುತ್ತೇವೆ. ಮುಂದೆ ಈ ರೀತಿ ಘಟನೆಗಳು ಅಗದ ರೀತಿಯಲ್ಲಿ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಯಾವ ಕೆಲಸವನ್ನು ಯಾವ ಉದ್ದೇಶಕ್ಕೆ ಮಾಡಿದ್ದಾರೆ ಅವರ ಹಿಂದೆ ಯಾರು ಇದ್ದಾರೆ ಎಂದು ಕೇಂದ್ರ ಸರ್ಕಾರ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

ಉಗ್ರರ ದಾಳಿಯ ಹೊಣೆ ಹೊತ್ತು ಪ್ರಧಾನಿ ಹಾಗೂ ಅಮಿತ್‌ ಷಾ ರಾಜೀನಾಮೆ ನೀಡಬೇಕು ಎಂಬ ಸಚಿವ ಮಹದೇವಪ್ಪನವರ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ,    ಅದು ಮಹದೇವಪ್ಪ ಅವರ ಅಭಿಪ್ರಾಯ, ಅದರ ಬಗ್ಗೆ ನಾನು  ಏನೂ ಹೇಳುವುದಿಲ್ಲ ಎಂದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮಾತುಕತೆ ವೇಳೆ, ಕೆಪಿಸಿಸಿ ಸಾರಥ್ಯವೂ ಯಥಾಸ್ಥಿತಿ ಇರಲಿ. ಮೇಲ್ಮನೆ ನಾಮನಿರ್ದೇಶನ ಕುರಿತಂತೆ ವೇಣುಗೋಪಾಲ್‌ ಅವರೊಟ್ಟಿಗೆ ಸಮಾಲೋಚನೆ ನಡೆಸಿ, ಮುಂದುವರಿಯಿರಿ ಎಂದು ರಾಹುಲ್‌ ಗಾಂಧಿ ಸಿಎಂಗೆ ಸೂಚಿಸಿದ್ದರು.

Related Posts

Leave a Reply

Your email address will not be published. Required fields are marked *