Menu

ಜಾಹೀರಾತು ನೋಡಿ ಆನ್​​ಲೈನ್​ನಲ್ಲಿ ಸೀರೆ ಬುಕ್: ಬೆಂಗಳೂರು ಐಎಎಸ್ ಅಧಿಕಾರಿಗೆ ವಂಚನೆ

ಯುಟ್ಯೂಬ್ ಚಾನಲ್​​ವೊಂದರಲ್ಲಿ ಬಂದ ಜಾಹೀರಾತು ನೋಡಿ ಆನ್​​ಲೈನ್​ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೊಳಗಾಗಿ ಪೊಲೀಸ್‌ಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೋಡಿ ವಸ್ತುಗಳನ್ನು ಕೊಂಡುಕೊಳ್ಳುವ ಮುನ್ನ ಎಚ್ಚರ ವಹಿಸುವಂತೆ ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ತಿಳಿಸಿದ್ದು, ಇವರು ನೀಡಿದ ದೂರು ಆಧರಿಸಿ ಪೂರ್ವ ವಿಭಾಗದ  ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಮಾರಾಟದ ಬಗ್ಗೆ ನಗರದ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವೀಡಿಯೊವನ್ನು ಪಲ್ಲವಿ ನೋಡಿದ್ದರು. ಸೀರೆ ಆಯ್ಕೆ ಮಾಡಿ, ಅದರ ಸ್ಕ್ರೀನ್ ಶಾಟ್ ಜೊತೆಗೆ ಆನ್​ಲೈನ್ ಮೂಲಕ ಮಾರ್ಚ್​​ 10ರಂದು 850 ರೂಪಾಯಿ ಗೂಗಲ್ ಪೇ ಮೂಲಕ ಮಾಡಿದ್ದರು. ಹಲವು ದಿನಗಳು ಕಳೆದರೂ ಮಾರಾಟಗಾರರು ಸೀರೆ ಮನೆ ವಿಳಾಸಕ್ಕೆ ಕಳುಹಿಸಲಿರಲಿಲ್ಲ. ಹಣವನ್ನು ಕೂಡ ರಿಫಂಡ್ ಮಾಡಿರಲಿಲ್ಲ. ಕರೆ ಹಾಗೂ ಮೇಸೆಜ್ ಮಾಡಿದರೂ ಸ್ಪಂದಿಸದೆ ತನಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ಧಾರೆ. ವೀಡಿಯೋದಲ್ಲಿ ಬಂದ ಜಾಹೀರಾತಿನಿಂದ ತನಗೆ ಮಾತ್ರವಲ್ಲದೆ ಹಲವರಿಗೂ ಮೋಸ ಮಾಡಿರುವ ಶಂಕೆಯಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *