ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರನ್ನು ಹತ್ಯೆಗೈದ ಉಗ್ರರು ಇದನ್ನು ಮೋದಿಗೆ ಹೋಗಿ ಹೇಳು ಎಂದು ಹೇಳಿದ್ದಾರೆ ಎಂದು ಪತ್ನಿ ಪಲ್ಲವಿಗೆ ಹೇಳಿದ್ದಾರೆ.
ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಮಂಗಳವಾರ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಘಟನೆಯ ಮಾಹಿತಿ ಮಾಹಿತಿ ಪತ್ನಿ ಪಲ್ಲವಿ, ಉಗ್ರರು ಪತಿಯನ್ನು ಗುಂಡಿಕ್ಕಿ ಕೊಂದಾಗ,ನನ್ನನ್ನು ಹಾಗೂ ಮಗನನ್ನು ಕೂಡ ಕೊಲ್ಲುವಂತೆ ಹೇಳಿದೆವು. ಆದರೆ ಆತ ನಿಮ್ಮನ್ನು ಕೊಲ್ಲುವುದಿಲ್ಲ. ನೀವು ಹೋಗಿ ಮೋದಿಗೆ ಹೇಳಿ ಎಂದು ಹೇಳಿದ ಎಂದು ವಿವರಿಸಿದ್ದಾರೆ.
ಉಗ್ರರು ಕೊಲೆ ಮಾಡಿದ ನಂತರವೂ ಅದೇ ಜಾಗದಲ್ಲೇ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು. ಯಾರೂ ನಮ್ಮ ನೆರವಿಗೆ ಬರಲಿಲ್ಲ ಎಂದು ಪಲ್ಲವಿ ಹೇಳಿದ್ದಾರೆ.
ಪತಿ ಶವವನ್ನು ಶಿವಮೊಗ್ಗಕ್ಕೆ ಕರೆದೊಯ್ಯಲು ವಿಮಾನ ವ್ಯವಸ್ಥೆ ಮಾಡಿಕೊಡಿ. ನಾವು ಬೇಗ ಇಲ್ಲಿಂದ ಹೊರಟು ಹೋಗುತ್ತೇವೆ ಎಂದು ಪಲ್ಲವಿ ಮಾಧ್ಯಮಗಳ ಮುಂದೆ ಮನವಿ ಮಾಡಿದ್ದಾರೆ.