Menu

ವಿಧಾನಸೌಧ ಪ್ರವೇಶಕ್ಕೆ 150 ರೂ. ದುಬಾರಿಯೆಂದು ಸ್ಪೀಕರ್‌ ಖಾದರ್‌ ಆಕ್ಷೇಪ

ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ಶುಲ್ಕ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದ್ದಂತೆ ಪ್ರವಾಸೋದ್ಯಮ ಇಲಾಖೆ ವಿಧಾನಸೌಧಕ್ಕೆ ಗೈಡೆಡ್ ಟೂರ್​ಗೆ ಪ್ರತಿ ವ್ಯಕ್ತಿಗೆ ತಲಾ 150 ರೂ. ನಿಗದಿ ಪಡಿಸುವ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದೆ. ಇಷ್ಟು ದುಬಾರಿ ಪ್ರವೇಶ ಶುಲ್ಕಕ್ಕೆ ಸ್ಪೀಕರ್ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಗೈಡೆಡ್ ಟೂರ್ನಡಿ ಪ್ರವಾಸಿಗರಿಗೆ ತಲಾ 150ರೂ. ಪ್ರವೇಶ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿ​ಗೆ ಸಲ್ಲಿಸಿದೆ. ವಿಧಾನಸೌಧದ ಗೈಡೆಡ್ ಟೂರ್​ಗಾಗಿ ಗೈಡ್​ಗೆ ವೇತನ ನೀಡಬೇಕಾಗಿದ್ದು, ಇದೆಲ್ಲದರ ವೆಚ್ಚವನ್ನು ಲೆಕ್ಕಹಾಕಿ 150 ರೂ. ಪ್ರವೇಶ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆ ಮುಂದಿಟ್ಟಿದೆ.

ವಿಧಾನಸೌಧಕ್ಕೆ ಗೈಡೆಡ್ ಟೂರ್ ಜೊತೆಗೆ ಪ್ರವಾಸೋದ್ಯಮ ಇಲಾಖೆ ಸಾಮಾನ್ಯ ಪ್ರವಾಸಿಗರಿಗೆ (ಗೈಡೆಡ್ ಟೂರ್ ಮಾಡದವರಿಗೆ) ಉಚಿತ ಪ್ರವೇಶ ನೀಡವುದಕ್ಕೆ ಕೂಡ ಚಿಂತನೆ ನಡೆಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರಿಗೆ ತಲಾ 150 ರೂ. ನಿಗದಿ ಮಾಡುವ ಪ್ರವಾಸೋದ್ಯಮದ ಪ್ರಸ್ತಾವನೆಗೆ ಸ್ಪೀಕರ್ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ದುಬಾರಿ ಪ್ರವೇಶ ಶುಲ್ಕ ಪ್ರವಾಸಿಗರಿಗೆ ಹೊರೆಯಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ದುಬಾರಿ ಶುಲ್ಕವನ್ನು ಪರಿಷ್ಕರಿಸುವಂತೆ ಸೂಚನೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *