ಅಂತಾರಾಷ್ಟ್ರೀಯ ಕ್ರಿಕೆಟಿಗರ ಬಹುನಿರೀಕ್ಷಿತ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟವಾಗಿದ್ದು, ಹೊರಹಾಕಲ್ಪಟ್ಟಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಮರಳಿದ್ದಾರೆ.
ಕೆಲವು ತಿಂಗಳಿಂದ ಮುಂದೂಡಲ್ಪಟ್ಟಿದ್ದ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಸೋಮವಾರ ಪ್ರಕಟವಾಗಿದ್ದು, ನಿಯಮ ಉಲ್ಲಂಘಿಸಿದ್ದಕ್ಕಾಗಿ 2023-24ನೇ ಸಾಲಿನ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಮರಳಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಕೆಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಎ ದರ್ಜೆಗೆ ಬಡ್ತಿ ಪಡೆದಿದ್ದಾರೆ.
ಎ ಪ್ಲಸ್ ನಲ್ಲಿ ಕೊಹ್ಲಿ, ರೋಹಿತ್
ಗುತ್ತಿಗೆ ಪಟ್ಟಿಯ ಎ ಪ್ಲಸ್ ದರ್ಜೆಯಲ್ಲಿ ನಾಲ್ವರು ಮಾತ್ರ ಸ್ಥಾನ ಪಡೆದಿದ್ದು, ಈ ಬಾರಿ ಗುತ್ತಿಗೆ ಪಟ್ಟಿಯಿಂದ ಹೊರಬೀಳಲಿದ್ದಾರೆ ಎಂದು ಹೇಳಲಾಗಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್ ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸ್ಥಾನ ಗಳಿಸಿದ್ದಾರೆ.
ಸಿ ದರ್ಜೆಯ ಆಟಗಾರರ ಪಟ್ಟಿಯಲ್ಲಿ ರಜತ್ ಪಟಿದಾರ್, ನಿತಿಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ಹೊಸದಾಗಿ ಕಾಣಿಸಿಕೊಂಡಿದ್ದು, ಎ ದರ್ಜೆಯ ಶುಭಮನ್ ಗಿಲ್, ಮೊಹಮದ್ ಸ್ಥಾನ ಉಳಿಸಿಕೊಂಡಿದ್ದಾರೆ.
ಬಿ ದರ್ಜೆಯಲ್ಲಿ ಅಯ್ಯರ್, ಜೈಸ್ವಾಲ್
ಬಿ ದರ್ಜೆ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್ ಸ್ಥಾನ ಗಳಿಸಿದ್ದಾರೆ.
ಸಿ ದರ್ಜೆ ಪಟ್ಟಿಯಲ್ಲಿ 19 ಆಟಗಾರರು
ಸಿ ದರ್ಜೆಯ ಆಟಗಾರರ ಪಟ್ಟಿಯಲ್ಲಿ 19 ಆಟಗಾರರು ಸ್ಥಾನ ಗಳಿಸಿದ್ದು, ಇಶಾನ್ ಕಿಶನ್, ರಿಂಕು ಸಿಂಗ್, ತಿಲಕ್ ವರ್ಮ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಶ್ನೋಯಿ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ರಜತ್ ಪಟಿದಾರ್, ಧ್ರುವ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮ, ಅಕ್ಷ್ ದೀಪ್, ವರುಣ್ ಚಕ್ರವರ್ತಿ.
ಎ ಪ್ಲಸ್ ದರ್ಜೆ ಆಟಗಾರರಿಗೆ ವಾರ್ಷಿಕ 7 ಕೋಟಿ ರೂ. ಎ ದರ್ಜೆ ಆಟಗಾರರಿಗೆ ವಾರ್ಷಿಕ 5 ಕೋಟಿ ರೂ. ಬಿ ದರ್ಜೆ ಆಟಗಾರರಿಗೆ 3 ಕೋಟಿ ರೂ. ಹಾಗೂ ಸಿ ದರ್ಜೆ ಆಟಗಾರರಿಗೆ 1 ಕೋಟಿ ರೂ. ದೊರೆಯಲಿದೆ.