Menu

ಗದಗದಲ್ಲಿ ಮಾಜಿ ಪ್ರೇಮಿಯಿಂದ ವೀಡಿಯೊ ವೈರಲ್‌ ಬೆದರಿಕೆ: ಮದುವೆ ಸಂಭ್ರಮದಲ್ಲಿದ್ದ ಯುವತಿ ಸುಸೈಡ್‌

ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಮಾಜಿ ಪ್ರೇಮಿ ನಿನ್ನ ವೀಡಿಯೊ ವೈರಲ್‌ ಮಾಡುವುದಾಗಿ ಬ್ಲ್ಯಾಕ್​ ಮೇಲ್ ಮಾಡಿದ್ದಕ್ಕೆ ಹೆದರಿ ಮದುವೆ ಸಂಭ್ರಮದಲ್ಲಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಯಿರಾಬಾನು ನದಾಫ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಾಯಿರಾಬಾನು ಡೆತ್​​ನೋಟ್​ ಬರೆದಿಟ್ಟಿದ್ದು, ಮೈಲಾರಿ ಎಂಬಾತನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ.

ಮೇ 8ರಂದು ಸಾಯಿರಾಬಾನು ನದಾಫ್​ ಮದುವೆ ನಿಗದಿಯಾಗಿತ್ತು. ಮನೆಯಲ್ಲಿ ಮದುವೆಗೆ ಭರ್ಜರಿ ತಯಾರಿ ನಡೆದಿತ್ತು. ಸಾಯಿರಾಬಾನು ಖುಷಿಯಿಂದಲೇ ತಾಳಿ, ಬಟ್ಟೆ ಖರೀದಿಸಿದ್ದರು. ಪೋಷಕರು ಮದುವೆ ವಸ್ತುಗಳ ಖರೀದಿಗೆ ಹೋದಾಗ ಸಾಯಿರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐದು ವರ್ಷಗಳ ಹಿಂದೆ ಮೈಲಾರಿ ಜೊತೆ ಸಾಯಿರಾಬಾನು ನದಾಫ್​ ಲವ್​ ಬ್ರೇಕಪ್ ಆಗಿತ್ತು. ನಿನಗೆ ತೊಂದರೆ ಕೊಡಲ್ಲ ಅಂತ ಮಾಜಿ ಪ್ರೇಮಿ ಬರ್ತಡೇ ಆಚರಿಸಿದ್ದ. ಐದು ವರ್ಷಗಳ ಬಳಕ ಮತ್ತೆ ವೀಡಿಯೊ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್​​ ಮಾಡಿದ್ದಾನೆ. ಹೆದರಿದ ಸಾಯಿರಾಬಾನು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಸಾಯಿರಾಬಾನು ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು. ಕುಸ್ತಿ ಸೇರಿ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದರು. ಘಟನಾ ಸ್ಥಳಕ್ಕೆ ಪಿಎಸ್ಐ ಲಾಲಸಾಬ್ ಜೂಲಕಟ್ಟಿ ಭೇಟಿ ಪರಿಶೀಲನೆ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *