ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೆಇಇ ಮುಖ್ಯ ಸೆಷನ್ 2 ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 24 ಅಭ್ಯರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.
ಕರ್ನಾಟಕದಿಂದ ಕುಶಾಗ್ರ ಗುಪ್ತ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ರಾಜಸ್ತಾನದ ೭ ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ. ಅಭ್ಯರ್ಥಿಗಳು JEE ಮುಖ್ಯ ಅಧಿಕೃತ ವೆಬ್‌ಸೈಟ್ jeemain.nta.nic.in ಗೆ ಭೇಟಿ ನೀಡುವ ಮೂಲಕ ಫಲಿತಾಂಶ ಪರಿಶೀಲಿಸಬಹುದು.
ಫಲಿತಾಂಶ ಪರಿಶೀಲಿಸಲು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಬೇಕಾಗುತ್ತದೆ. NTA ಜೆಇಇ ಮುಖ್ಯ ಪತ್ರಿಕೆ 1 (ಬಿಇ/ಬಿಟೆಕ್) ಫಲಿತಾಂಶವನ್ನು ಮಾತ್ರ ಘೋಷಿಸಿದೆ. ಪತ್ರಿಕೆ 2 (ಬಿ.ಆರ್ಕ್/ಬಿ.ಪ್ಲಾನಿಂಗ್) ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.