Menu

ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಯಿಂದ ಬಾಲಕ ಸಾವು

ತೀರ್ಥಹಳ್ಳಿ ತಾಲೂಕಿನ ದತ್ತರಾಜಪುರ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾಮು ಹಾಗೂ ಮಮತಾ ಎಂಬವರ ಮಗ ರಚಿತ್ ಮೃತ ಬಾಲಕ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕ ಅಸು ನೀಗಿದ್ದಾನೆ. ಈ ಮೂಲಕ ತೀರ್ಥಹಳ್ಳಿ ತಾಲೂಕಿನಲ್ಲಿ ಈ ವರ್ಷ ಮಂಗನ ಕಾಯಿಲೆಗೆ ಇಬ್ಬರು ಬಲಿಯಾಗಿದ್ದಾರೆ.

ಬಾಲಕ ಸಾವಿನ ಕುರಿತು ಒಂದು ವಾರದಲ್ಲಿ ಡೆತ್ ಅಡಿಟ್​ ವರದಿ ನೀಡಲು ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಬೇಸಿಗೆ ತಿಂಗಳಲ್ಲಿ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪರದಾಡುತ್ತಿದೆ, ಕಾಡಿನಂಚಿನಲ್ಲಿ ನೆಲಸಿರುವ ಗ್ರಾಮಸ್ಥರು ಆತಂಕ ದಲ್ಲಿದ್ದಾರೆ.

ರಚಿತ್ ಅವರ ಸಹೋದರಿ ರಮ್ಯಾಗೆ ಏಪ್ರಿಲ್ 4 ರಂದು ಜ್ವರ ಬಂದಿತ್ತು. ಆಕೆಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿದ ಕೆಎಫ್‌ಡಿ ಪಾಸಿಟಿವ್ ದೃಢಪಟ್ಟಿತ್ತು. ಏಪ್ರಿಲ್ 5 ರಂದು ರಚಿತ್​ಗೆ ಆಯಾಸ ಮತ್ತು ವಾಂತಿ ಹಿನ್ನಲೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿತು. ಆತನಿಗೆ ಕೆಎಫ್​ಡಿ ಪಾಸಿಟಿವ್ ಬಂದಿದೆ. ರಚಿತ್​ನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಂಗನ ಕಾಯಿಲೆ ಹತೋಟಿಗೆ ತರುವಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಾರಿ ಯಶಸ್ಸು ಕಂಡಿದೆ.

Related Posts

Leave a Reply

Your email address will not be published. Required fields are marked *