ರಾಯಚೂರು: ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ವ್ಯಕ್ತಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಜರುಗಿದೆ.
ತಾಲೂಕಿನ ಮರ್ಚಟ್ಹಾಳ ಗ್ರಾಮ ವ್ಯಕ್ತಿ ಹನುಮಂತ ಯಾದವ್(45), ಉಡಮಗಲ್-ಖಾನಾಪುರ ಗ್ರಾಮ ಮಲ್ಲಮ್ಮ ಭೀಮರಾಯಪ್ಪ(50) ಸಿಡಿಲಿಗೆ ಬಲಿಯಾದವರು ಎಂದು ಗುರುತಿಸಲಾಗಿದೆ.
ಜಿಲ್ಲೆಯ ಗಾಳಿ, ಗುಡುಗು-ಮಿಂಚಿನೊಂದಿಗೆ ನಾನಾ ಕಡೆಗಳಲ್ಲಿ ಮಳೆಯಾಗಿದೆ. ಇದೇ ಸಂಜೆ ವೇಳೆ ಎರಡು ಗ್ರಾಮದಲ್ಲಿ ಗುಡುಗು, ಗಾಳಿ, ಮಿಂಚಿನೊಂದಿಗೆ ಮಳೆಯಾಗಿದ್ದು, ಇದೇ ಸಮಯದಲ್ಲಿ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರು ಸ್ವಾನ್ನಪ್ಪಿದ್ದಾರೆ. ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.