Menu

ತಡೆಗೋಡೆಗೆ ಡಿಕ್ಕಿ ಹೊಡೆದ ಗೂಡ್ಸ್ ಪಿಕಪ್ ವಾಹನ: ನಾಲ್ವರು ಸ್ಥಳದಲ್ಲೇ ದುರ್ಮರಣ

raichur

ರಾಯಚೂರು: ನಿಯಂತ್ರಣ ತಪ್ಪಿದ ಗೂಡ್ಸ್ ಪಿಕಪ್ ವಾಹನ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಬಳಿ ಗುರುವಾರ ಸಂಭವಿಸಿದೆ.

ತೆಲಂಗಾಣದ ಹಿಂದೂಪುರ ನಿವಾಸಿಗಳಾದ ನಾಗರಾಜ್ (28), ಸೋಮು (38), ನಾಗಭೂಷಣ್ (36) ಹಾಗೂ ಮುರಳಿ (38) ಮೃತಪಟ್ಟಿದ್ದಾರೆ.

ದೇವದುರ್ಗ ತಾಲೂಕಿನ ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದ್ದು, ತೆಲಂಗಾಣದ ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ನಡೆಯುವ ಕುರಿ ಸಂತೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ.

ವೇಗವಾಗಿದ್ದ ಹಿನ್ನಲೆ ನಿಯಂತ್ರಣ ತಪ್ಪಿ ಹಳ್ಳದ ತಡೆಗೋಡೆಗೆ ಗೂಡ್ಸ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಆನಂದ್​​ಗೆ ಗಂಭೀರ ಗಾಯವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ತೆಲಂಗಾಣದ ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಪುರಕ್ಕೆ ಕುರಿ ಖರೀದಿಗೆ ಹೋಗಿದ್ದೆವು. ರಾತ್ರಿ 10 ಕ್ಕೆ ಊಟ ಮಾಡಿ ಮಲಗಿದ್ದೆವು. ವಾಹನ ಯಾರು ಓಡಿಸುತ್ತಿದ್ದರು ಗೊತ್ತಿಲ್ಲ. ತಡ ರಾತ್ರಿ ಪೊಲೀಸರು ಬಂದು ನೀರು ಕುಡಿಸಿದಾಗ ಎಚ್ಚರವಾಗಿದೆ. ಕಾಲಿಗೆ ಗಂಭೀರಗಾಯವಾಗಿದೆ ಅಂತ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *