ಭಾರತದಲ್ಲಿ ಹೆದ್ದಾರಿಯಲ್ಲಿ ಟೋಲ್ ಪಾವತಿ ನಗದು ವ್ಯವಹಾರಬದಲು ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈಗ ಎಲೆಕ್ಟ್ರಾನಿಕ್ ಸಿಸ್ಟಮ್ ಮೂಲಕ ಟೋಲ್ ಸಂಗ್ರಹಿಸುತ್ತಿದ್ದು, ಇನ್ಮುಂದೆ ಅತ್ಯಾಧುನಿಕ ಹಾಗೂ ಹೆಚ್ಚು ಕಾರ್ಯಕ್ಷಮತೆಯ ಸ್ಯಾಟಲೈಟ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಿಸ್ಟಮ್ ಮೇ 1 ರಿಂದ ಆರಂಭಗೊಳ್ಳುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹೊಸ ಟೋಲ್ ವ್ಯವಸ್ಥೆ ಅಂದರೆ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಹೆಚ್ಚು ಪಾರದರ್ಶಕತೆಯಿಂದ ಕೂಡಿದೆ. ಈ ವ್ಯವಸ್ಥೆಯಲ್ಲಿ ವಾಹನ ಟೋಲ್ ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ಆಧರಿಸಿ ಟೋಲ್ ಶುಲ್ಕ ವಿಧಿಸಲಾಗುವುದು.
ಈ ಟೋಲ್ ವ್ಯವಸ್ಥೆ ಅಡಿಯಲ್ಲಿ ಪ್ರತಿ ದಿನ ಟೋಲ್ ರಸ್ತೆಯಲ್ಲಿ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ. ಅಂದರೆ 20 ಕಿಲೋಮೀಟರ್ ಬಳಿಕ ಶುಲ್ಕ ಅನ್ವಯವಾಗುತ್ತದೆ. ಆರಂಭಿಕ 20 ಕಿಲೋಮೀಟರ್ ಉಚಿತ ಎಂದು ಸಚಿವ ಗಡ್ಕರಿ ಹೇಳಿದ್ದಾರೆ.