Menu

ಹುಬ್ಬಳ್ಳಿ ಎನ್‌ಕೌಂಟರ್ ತನಿಖೆಗೆ ಸಚಿವ ಡಾ.ಜಿ ಪರಮೇಶ್ವರ್ ಸೂಚನೆ

ಬೆಂಗಳೂರು:ಬಾಲಕಿಯ ಮೇಲೆ ಅತ್ಯಾಚಾರ ಕೊಲೆ ಪ್ರಕರಣದ ಸಂಬಂಧ ಹುಬ್ಬಳ್ಳಿಯಲ್ಲಿ ರಿತೇಶ್ ಕುಮಾರ್ ಎನ್‌ಕೌಂಟರ್ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡಿಕ್ಕಿದ್ದಾರೆ ಆದರೆ ಅದು ಬೆನ್ನಿಗೆ ಬಿದ್ದಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಎನ್ ಕೌಂಟರ್ ಘಟನೆ ಸಂಬಂಧಿಸಿದಂತೆ ತಕ್ಷಣಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ ತನಿಖೆಯ ವರದಿ ಬಂದ ನಂತರದಲ್ಲಿ ಸತ್ಯಾಂಶ ಗೊತ್ತಾಗುತ್ತದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಏನ್ ಕೌಂಟರ್ ನಲ್ಲಿ ಬಲಿಯಾದ ಬಿಹಾರ ಮೂಲದ ವ್ಯಕ್ತಿ ಐದು ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಆತನ ಬಂಧನವಾಗಿದೆ. ಆತನನ್ನು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗುವ ವೇಳೆ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಪೊಲೀಸರು ಅವರ ಆತ್ಮ ರಕ್ಷಣೆ ಮಾಡಿಕೊಳ್ಳಬೇಕಲ್ಲಾ. ಹೀಗಾಗಿ ಕಾಲಿಗೆ ಗುಂಡು ಹಾರಿಸಿದ್ದಾರೆ ಆದರೆ ಅದು ಬೆನ್ನಿಗೆ ಬಿದ್ದಿದೆ. ಆತನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ಆತ ಆಸ್ಪತ್ರೆಗೆ ಹೋಗುವಾಗಲೇ ತೀರಿಕೊಂಡಿದ್ದಾನೆ ಎಂದು ವರದಿ ಬಂದಿದೆ ಎಂದು ವಿವರಿಸಿದರು.

ನಾನು ತಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ತನಿಖೆ ಮಾಡಿದ ನಂತರದಲ್ಲಿ ಸತ್ಯಾಂಶ ಗೊತ್ತಾಗುತ್ತದೆ. ಬಿಟಿಎಂ ಲೇಔಟ್‌ನಲ್ಲಿ ನಡೆದ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯನ್ನು ಕೇರಳದಲ್ಲಿ ಬಂಧನವಾಗಿದೆ. ಆತ ಕಲಬುರಗಿ ಮೂಲದವನು ಎಂದು ತಿಳಿದುಬಂದಿದೆ ಎಂದು ವಿವರಣೆ ನೀಡಿದರು.

ಜಾತಿ ಜನಗಣತಿ ವರದಿ ವಿಚಾರವಾಗಿ ಮಾತನಾಡಿ, ಇನ್ನು ವರದಿಯನ್ನು ನಾನು ಓದುತ್ತಿದ್ದೇನೆ, ನಾಲ್ಕೈದು ಪುಟ ಓದಿದ್ದೇನೆ . ಒಟ್ಟಾರೆ ಇದರಲ್ಲಿ ಎರಡು ಮೂರು ವಿಚಾರಗಳಿವೆ. 2018ರಲ್ಲಿ ಪ್ರಾರಂಭ ಮಾಡಿ ಮುಗಿದಿದೆ ಎಂದು ಹೇಳಿ ಎರಡು ಮೂರು ವರ್ಷವಾಗಿದೆ, ಅದರ ಇಂಪ್ಯಾಕ್ಟ್, ಯೋಜನೆಗಳು ಚರ್ಚೆ ಒಂದು ಭಾಗದಲ್ಲಿ ಇಡೋಣ. ವಸ್ತುಸ್ಥಿತಿ ಏನಿದೆ ಎಂದು ಗೊತ್ತಾಗಿದೆ. ಮುಂದೆ ಅದರ ಎಫೆಕ್ಟ್ ಯೋಜನೆಗಳು ಕಾರ್ಯಕ್ರಮ ಈಗಲೇ ಹೇಳಲು ಆಗುವುದಿಲ್ಲ ಎಂದರು.

ನಮಗೆ ಸಂಪುಟದಲ್ಲಿ ಕೊಟ್ಟಿರುವ ಪ್ರತಿಗಳನ್ನು ಎಲ್ಲಾ ಮಂತ್ರಿಗಳು ಓದಿಕೊಂಡು ಬರಬೇಕು ಎಂದು ಸಿಎಂ ಹೇಳಿದ್ದಾರೆ. 17 ರಂದು ಬೇರೆ ಯಾವುದು ವಿಷಯ ಬೇಡ ಈ ಒಂದು ವಿಚಾರದ ಮೇಲೆ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಚರ್ಚೆ ಮಾಡಿದ ನಂತರದಲ್ಲಿ ಸ್ವೀಕರಿಸುವ ಬಗ್ಗೆ ತೀರ್ಮಾನ ಆಗಲಿದೆ. ಈಗ ವರದಿಯ ಬಗ್ಗೆ ನಾವು ಏನು ಹೇಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾತಿ ಗಣತಿ ಸಮೀಕ್ಷೆ 2018 ರಿಂದ ಪ್ರಾರಂಭವಾಗಿದ್ದು, 10 ವರ್ಷಗಳ ಬಳಿಕ ನಾವು ಆಚೆಗೆ ತರುತ್ತಿದ್ದೇವೆ. ಇದರ ಬಗ್ಗೆ ಅಧ್ಯಯನ ಮಾಡಿ ಚರ್ಚೆ ಮಾಡಬೇಕಿದೆ. ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ. ಸಮುದಾಯದ ಅಭಿಪ್ರಾಯಗಳು , ರಾಜಕಾರಣಿಗಳ ಅಭಿಪ್ರಾಯಗಳು , ಎಲ್ಲವೂ ಬರುತ್ತಿದೆ ಚರ್ಚೆ ಮಾಡಿ ನಂತರ ನೋಡುತ್ತೇವೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *