ಬೆಂಗಳೂರಿನ ವೀರನಪಾಳ್ಯದಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿ ಕೂಲಿ ಕಾರ್ಮಿಕರು ವಾಸವಿದ್ದ 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಯಿಂದ ಭಸ್ಮವಾಗಿ ಹೋಗಿವೆ.
ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿ ಕೂಲಿ ಕಾರ್ಮಿಕರು 50 ಶೆಡ್ ನಿರ್ಮಿಸಿಕೊಂಡಿದ್ದರು. ಒಂದು ಶೆಡ್‍ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೇರೆ ಶೆಡ್‍ಗಳಿಗೂ ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನ ಹೊರಗೆ ಓಡಿ ಹೋಗಿದ್ದಾರೆ.
ವಿಚಾರ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಕಾರಣವೇನು ಎಂಬ ತನಿಖೆ ಮುಂದುವರಿದಿದೆ