Menu

ಉಕ್ರೇನ್ ನ ಭಾರತದ ಔಷಧ ಉಗ್ರಾಣದ ಮೇಲೆ ರಷ್ಯಾ ಕ್ಷಿಪಣಿ ದಾಳಿ!

russia attack

ಕೀವ್: ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಭಾರತದ ಔಷಧ ಉಗ್ರಾಣದ ಮೇಲೆ ಶನಿವಾರ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.

ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಎಕ್ಸ್ ನಲ್ಲಿ ಈ ವಿಷಯ ಪ್ರಕಟಿಸಿದ್ದು, ಉಕ್ರೇನ್ ನಲ್ಲಿ ಭಾರತದ ಔಷಧ ಉದ್ಯಮಕ್ಕೆ ಧಕ್ಕೆ ತರಲು ರಷ್ಯಾ ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಿದೆ ಎಂದು ಆರೋಪಿಸಿದೆ.

ಉಕ್ರೇನ್ ನ ಕುಸುಮ್ ನಲ್ಲಿರುವ ಔಷಧ ಉಗ್ರಾಣದ ಮೇಲೆ ಭಾರತದ ಪರಮಾಪ್ತ ದೇಶವಾದ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ಉಗ್ರಾಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ಔಷಧಗಳನ್ನು ಸಂಗ್ರಹಿಸಲಾಗಿತ್ತು ಎಂದು ಉಕ್ರೇನ್ ಆರೋಪಿಸಿದೆ.

ಬ್ರಿಟನ್ ರಾಯಭಾರ ಕಚೇರಿ ಕೂಡ ಉಕ್ರೇನ್ ನಲ್ಲಿರುವ ಭಾರತದ ಔಷಧ ಉಗ್ರಾಣದ ಮೇಲೆ ನಡೆದ ದಾಳಿ ನಡೆದಿರುವುದನ್ನು ದೃಢಪಡಿಸಿದೆ. ಕ್ಷಿಪಣಿ ದಾಳಿಯಲ್ಲಿ ಸಾವು-ನೋವಿನ ಕುರಿತು ಯಾವುದೇ ವರದಿ ಆಗಿಲ್ಲ.

Related Posts

Leave a Reply

Your email address will not be published. Required fields are marked *