ಅಲಿಘಡದ ಮಂಡ್ರಾಕ್ ಪ್ರದೇಶದಲ್ಲಿ ಭಾವಿ ಅಳಿಯನೊಂದಿಗೆ 40 ವರ್ಷದ ಮಹಿಳೆಯೊಬ್ಬರು ಓಡಿ ಹೋಗಿರುವ ಪ್ರಕರಣ ನಡೆದಿದೆ. ಮಗಳ ವಿವಾಹ ಏಪ್ರಿಲ್ 16 ರಂದು ನಡೆಯಬೇಕಿತ್ತು. ಮದುವೆಗೆ ಕೆಲವೇ ದಿನಗಳಿರುವಾಗ ತಾಯಿಯು 2.5 ಲಕ್ಷ ರೂ. ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಮಗಳ ಭಾವಿ ಪತಿ ಯಾಗಿದ್ದ ಬೇಕಿದ್ದ ಯುವಕನೊಂದಿಗೆ ಹೋಗಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಡು-ಹೆಣ್ಣಿನ ಮನೆಯವರು ಮದುವೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕಳೆದ ಭಾನುವಾರ ಮದುಮಗ ಬಟ್ಟೆ ಖರೀದಿಸಲು ಹೋಗುವುದಾಗಿ ಹೇಳಿ ಮನೆ ಯಿಂದ ಹೊರಟಿದ್ದ. ನಂತರ ತಂದೆಗೆ ಕರೆ ಮಾಡಿ, ‘ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಹುಡುಕಲು ಪ್ರಯತ್ನಿಸಬೇಡಿʼ ಎಂದು ಹೇಳಿದ್ದಾನೆ. ಅದೇ ಸಮಯದಲ್ಲಿ ವಧುವಿನ ತಾಯಿ ಕೂಡ ಯಾವುದೇ ಮಾಹಿತಿ ನೀಡದೆ ಮನೆಯಿಂದ ಹೊರಟಿದ್ದಾಳೆ. ಇಬ್ಬರೂ ಒಟ್ಟಿಗೆ ಓಡಿಹೋಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಈ ಸಂಬಂಧ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ, ಎರಡೂ ಕುಟುಂಬಗಳ ಹೇಳಿಕೆ ಪಡೆದು ತನಿಖೆ ಪ್ರಾರಂಭಿಸಿದ್ದೇವೆ. ತಲೆಮರೆಸಿಕೊಂಡಿರುವ ಜೋಡಿ ಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮಂಡ್ರಾಕ್ ಪೊಲೀಸ್ ಠಾಣಾಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ. ಮದುವೆಯಾಗಬೇಕಿದ್ದ ಯುವಕ ಉತ್ತರಾಖಂಡದಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ವಿಶೇಷ ತನಿಖಾ ತಂಡವನ್ನು ತಂಡವನ್ನು ಉತ್ತರಾಖಂಡಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ಗಾಗಿ ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ ಯುವಕ ವಧುವಿನ ಮನೆಗೆ ನಿಯಮಿತವಾಗಿ ಬರುತ್ತಿದ್ದ. ಭಾವಿ ಅತ್ತೆಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ್ದ. ನಂತರ ಇಬ್ಬರೂ ನಿರಂತರ ಸಂಪರ್ಕ ದಲ್ಲಿದ್ದರು. ಇಂತಹ ಸಂಬಂಧವು ಓಡಿಹೋಗುವ ಹಂತಕ್ಕೆ ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಸಂಬಂಧಿ ಮಹಿಳೆ ಹೇಳಿದ್ದಾರೆ.