ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಯಗವಕೋಟೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಶಿಕ್ಷಕಿ ಸರಸ್ವತಿ ಕೋಲು ಬೀಸಿದ್ದರಿಂದ ಮಗ ದೃಷ್ಟಿ ಕಳೆದುಕೊಂಡಿರುವುದಾಗಿ ಅದೇ ಗ್ರಾಮದ ನಟರಾಜ್ ಹಾಗೂ ಅಂಕಿತಾ ದಂಪತಿ ಆರೋಪಿಸಿದ್ದಾರೆ.
ಈಗ ಎರಡನೇ ತರಗತಿಯಲ್ಲಿರುವ ಯಶ್ವಂತ್‌ಗೆ ಒಂದನೇ ತರಗತಿಯಲ್ಲಿ ಶಿಕ್ಷಕಿ ಬೀಸಿದ ಕೋಲಿನಿಂದ ಕಣ್ಣಿಗೆ ಗಾಯವಾಗಿದ್ದು, ಅಂದಿನಿಂದ ಎಲ್ಲ ಕಡೆ ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗದೆ ಆತ ದೃಷ್ಟಿ ಕಳೆದುಕೊಂಡಿರುವುದಾಗಿ ಪೋಷಕರು ದೂರಿದ್ದಾರೆ. ಮಗನಿಗೆ ಆಗಿರುವ ಹಾನಿ ಮತ್ತು ಅನ್ಯಾಯಕ್ಕೆ ಸೂಕ್ತ ನ್ಯಾಯಕ್ಕಾಗಿ ಚಿಂತಾಮಣಿ ಬಿಇಒ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ಶಿಕ್ಷಕಿ ಸರಸ್ವತಿ ವಿರುದ್ದ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ದೂರು ದಾಖಲಿಸಿಕೊಂಡಿಲ್ಲ, ಬಿಇಐ ಸೇರಿದಂತೆ ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ದೂರು ದಾಖಲಿಸಿ ಕ್ರಮ ಕೈಗೊಳ್ಳುವುದರ ಬದಲು ನ್ಯಾಯ ಪಂಚಾಯತಿಗೆ ಮುಂದಾಗಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ.