ಕೋಲಾರ: ಸಂಸತ್ತಿನಲ್ಲಿ ಅಡ್ಡ ಮತ ಪಡೆದು ವಕ್ಫ್ ಮಸೂದೆಗೆ ಅಂಗೀಕಾರ ಪಡೆದುಕೊಂಡಿದ್ದಾರೆ. ಈ ಕಾಯಿದೆಯು ಹೆಚ್ಚಿನ ಮುಸ್ಲೀಮರಿಗೆ ವಿರುದ್ಧವಾಗಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದೆ ಅಂಗೀಕಾರದ ಮೇಲೆ ಚರ್ಚೆಗೆ ವಿರೋಧ ಪಕ್ಷದವರಿಗೆ ಅವಕಾಶ ನೀಡಿಲ್ಲ, ಜತೆಗೆ ಬಹುಮತ ಸಹ ದೊರೆತಿಲ್ಲ ಎಂದರು.
ಸಂಸತ್ತಿನಲ್ಲಿ ರಾತ್ರಿ 3 ಗಂಟೆತನಕ ಚರ್ಚೆ ನಡೆಯುತ್ತಿದ್ದಾಗ ಮಲ್ಲಿಕಾರ್ಜುನ ರ್ಖಗೆ, ರಾಹುಲ್ ಗಾಂಧಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ವಿರುದ್ಧ ಧ್ವನಿ ಎತ್ತಲು ಪ್ರಯತ್ನಿಸಿದರೂ ಸಹ ಚರ್ಚೆಗೆ ಅವಕಾಶವೇ ನೀಡಿಲ್ಲ. ಏಕಪಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರಕ್ರಿಯಿಸಿದ ಸಚಿವರು, ಬಿಜೆಪಿಯವರಿಗೆ ನೈತಿಕತೆ, ಸಮಾಜದ ಬಗ್ಗೆ ಕಳಕಳಿಯಿದ್ದರೆ ಕೇಂದ್ರದ ವಿರುದ್ಧ ಹೋರಾಟ ಮಾಡಲಿ. ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಪಾಲು, ಅನುದಾನವನ್ನು ಕೇಳಲಿ. ರೈಲ್ವೆ, ತೈಲ, ಬಂಗಾರ ಬೆಲೆ ಏರಿಕೆ ಮಾಡಿದಾಗ ಯಾಕೆ ಪ್ರತಿಭಟನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಹಾಲಿನ ದರ ಏರಿಕೆಗೆ ಕುರಿತು ಉತ್ತರಿಸಿ, ರೈತರಿಗೆ ಅನುಕೂಲವಾಗುವ ತೀರ್ಮಾನ ಸರ್ಕಾರ ಕೈಗೊಂಡಿದೆ. ಪ್ರತಿ ಲೀಟರ್ ಹಾಲಿ ದರ ೪ ರೂ. ಏರಿಕೆಯಿಂದ ಸರಕಾರಕ್ಕೇನು ಲಾಭವಿಲ್ಲ. ಅದು ರೈತರಿಗೆ, ರೈತ ದೇಶದ ಬೆನ್ನೆಲಬು, ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಆಬೇಕು. ರೈತರನ್ನು ಬಿಜೆಪಿ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಛೇಡಿಸಿದರು.
ಬಿಜೆಪಿ ಸಿಎಂ ರಾಜೀನಾಮೆ ಕೇಳುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ೨೦೧೩ರ ಅವಧಿಗಿಂತ ಸಿಎಂ ಸಿದ್ದರಾಮಯ್ಯ ಅವರು ಈಗ ಚೆನ್ನಾಗಿ ಅಧಿಕಾರ ನಡೆಸುತ್ತಿದ್ದಾರೆ. ಇದು ಎಲ್ಲಾ ಸಚಿವರು, ಶಾಸಕರಿಗೆ ಬಹಳ ಇಷ್ಟವಾಗಿದೆ. ಅವರ ಪ್ರಶ್ನೆಗಳಿಗೆಲ್ಲ ಉತ್ತರಿಸಲು ಆಗುವುದಿಲ್ಲ ಎಂದ ಅವರು, ಬಿಜೆಪಿ ಕಾರ್ಯಕರ್ತ ವಿಜಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.