ಅಮೆರಿಕದ ಉತ್ಪನ್ನಗಳ ಮೇಲೆ ಶೇ.34ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಘೋಷಿಸುವ ಮೂಲಕ ಚೀನಾ ಅಮೆರಿಕದೊಂದಿಗೆ ತೆರಿಗೆ ಯುದ್ಧ ಸಾರಿದೆ. ತನ್ನ ಉತ್ಪನ್ನಗಳ ಮೇಲೆ ಶೇ.34ರಷ್ಟು ಪ್ರತಿತೆರಿಗೆ ಹಾಕಿದ ಅಮೆರಿಕದ ವಿರುದ್ಧ ಸಿಡಿದೆದ್ದಿರುವ ಚೀನಾ, ಕೆನಡಾ ಅಮೆರಿಕದ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಘೋಷಿಸಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿರುವ ತೆರಿಗೆ ನೀತಿಯು ವಿಶ್ವ ವ್ಯಾಪಾರ ಒಕ್ಕೂಟ (ಡಬ್ಲ್ಯುಟಿಓ) ನೀತಿಗೆ ವಿರುದ್ಧವಾಗಿದೆ. ಪ್ರತಿ ತೆರಿಗೆ ಯಿಂದಾಗಿ ಯಾರೂ ಗೆಲ್ಲುವುದಿಲ್ಲ. ತೆರಿಗೆ ಮತ್ತು ವ್ಯಾಪಾರ ಕುರಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದೂ ಚೀನಾ ಹೇಳಿದೆ.
ಈ ಮೊದಲೇ ಚೀನಾ ಉತ್ಪನ್ನಗಳ ಮೇಲೆ ಅಮೆರಿಕ ಶೇ.30ರಷ್ಟು ತೆರಿಗೆ ವಿಧಿಸುತ್ತಿತ್ತು. ಮತ್ತೆ ಶೇ.34ರಷ್ಟು ತೆರಿಗೆ ಹೇರಿದೆ. ಪ್ರತಿ ವರ್ಷ ಚೀನಾ ಅಮೆರಿಕಕ್ಕೆ 50 ಲಕ್ಷ ಕೋಟಿ ರೂ. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತದೆ. ಅಮೆರಿಕ ಚೀನಾಕ್ಕೆ ವಾರ್ಷಿಕ 12 ಲಕ್ಷ ಕೋಟಿ ರು. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತದೆ.
ತನ್ನೊಂದಿಗೆ ವ್ಯಾಪಾರ ನಡೆಸುವ ದೇಶಗಳ ಮೇಲೆ ಟ್ರಂಪ್ ಪ್ರತಿತೆರಿಗೆ ವಿಧಿಸಿದ್ದನ್ನು ಸ್ವತಃ ಅಮೆರಿಕ ಕೇಂದ್ರೀಯ ಬ್ಯಾಂಕ್ ವಿರೋಧ ವ್ಯಕ್ತಪಡಿಸಿದೆ. ಹೊಸ ತೆರಿಗೆ ನೀತಿಯಿಂದ ಹಣದುಬ್ಬರ ಏರಿಕೆಯ ಮತ್ತು ಆರ್ಥಿಕತೆ ಕುಸಿಯುವ ಭೀತಿಯೂ ಇದೆ ಎಂದು ಹೇಳಿದೆ.
ಭಾರತದ ಉತ್ಪನ್ನಗಳ ಆಮದಿನ ಮೇಲೆ ವಿಧಿಸಿದ್ದ ಪ್ರತಿತೆರಿಗೆ ಪ್ರಮಾಣವನ್ನು ಶೇ.27 ರಿಂದ 26ಕ್ಕೆ ಇಳಿಸಲಾಗಿದೆ. ಟ್ರಂಪ್ ತೆರಿಗೆ ದಾಳಿ ಬಳಿಕ 500 ಭಾರೀ ಶ್ರೀಮಂತರಿಗೆ 17 ಲಕ್ಷ ಕೋಟಿ ನಷ್ಟವಾಗಿದೆ. ಶ್ರೀಮಂತರು ಹೊಂದಿರುವ ಷೇರುಗಳ ಮೌಲ್ಯ ಕುಸಿತದ ಕಾರಣ ಈ ಬೆಳವಣಿಗೆ ಸಂಭವಿಸಿದೆ.