ಬೆಂಗಳೂರಿನ ನಾಗವಾರದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಡಿಕೇರಿಯ ಬಿಜೆಪಿ ಕಾರ್ಯಕರ್ತನ ಡೆತ್ ನೋಟ್‌ನಲ್ಲಿ, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ ತೆನ್ನೀರ ಮಹೀನ Tenneera Maheena (9449156215) ನನ್ನ ಸಾವಿಗೆ ನೇರ ಹೊಣೆ ಎಂದು ಬರೆದಿರುವುದು ಪತ್ತೆ ಯಾಗಿದೆ.
ಯಾರೋ ಒಬ್ಬರು “ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು” ವಾಟ್ಸಾಪ್ ಗ್ರೂಪಲ್ಲಿ ಹಾಕಿದ್ದಕ್ಕೆ ಅಡ್ಮಿನ್ ಆದ ನಮ್ಮನ್ನು ಹೊಣೆ ಮಾಡಿ ,ರಾಜಕೀಯ ಪ್ರೇರಿತ ಎಫ್‌ಐಆರ್ ಹಾಕಿ ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ ತೆನ್ನೀರ ಮಹಿನ ನನ್ನ ಸಾವಿಗೆ ನೇರ ಹೊಣೆ ಎಂದು ಬರೆದಿದೆ.
ನಮ್ಮ ಮೇಲೆ ಎಫ್‌ಐಆರ್ ಹಾಕಿ ಕಿಡಿಗೇಡಿಗಳು ಅಂತ ವೈರಲ್ ಮಾಡಿದ್ದು ಇವನೇ, ಆರೋಪ ಸಾಬೀತಾಗದೆ ನಮ್ಮ ಫೋಟೋವನ್ನು ನಮ್ಮ ಪರ್ಮಿಷನ್ ಇಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಉಪಯೋಗಿಸುತ್ತಾರೆ, ಅದನ್ನು ನೋಡಿದ ನಮ್ಮ ಮನೆಯವರು ಹಾಗೂ ಸಂಬಧಿಕರಿಗೆ ಹೇಗೆ ಅನ್ನಿಸಿರಬಹುದು ಅಂತ ನೀವೇ ಊಹಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಎಫ್‌ಐಆರ್ ಆದ ದಿನದಿಂದ ಜಾಮೀನು ಸಿಗುವ ತನಕ ನಾನು ನನ್ನ ಅಮ್ಮನ ಜೊತೆ ಮಾತಾಡಿಲ್ಲ. ಈ ವ್ಯಕ್ತಿಯ ಕಾರಣಕ್ಕಾಗಿ ಜೀವ ಕಳೆದುಕೊಳ್ಳುತಿರುವ ವ್ಯಕ್ತಿ ನಾನು ಮೊದಲಿಗನಲ್ಲ. ಆತನ ಮಡದಿ ಆಸ್ಪತ್ರೆಗೆ ಸೇರಿದ ದಿನವೇ ಇನ್ನೊಂದು ಆತ್ಮಹತ್ಯೆ ನಡೆಯಿತು. ಆ ಆತ್ಮಹತ್ಯೆ ಗೂ ಅವನ ಮಡದಿಗೆ ಏನು ಸಂಬಂಧ ಅಂತ ಅಧಿಕಾರಿಗಳು ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಡೆತ್‌ನೋಟ್‌ನಲ್ಲಿದೆ.
ನನ್ನ ಸಾವು ಮುಂದೆ ಆಗುವ ರಾಜಕೀಯ ಪ್ರೇರಿತ ಎಫ್‌ಐಆರ್ ಗೆ ಒಂದು ಪಾಠವಾಗಬೇಕು ಹಾಗೂ ಪೊಲೀಸ್ ನವರು ಸ್ವಲ್ಪ ವಿಚಾರ ಮಾಡಿ ಎಫ್‌ಐಆರ್ ಹಾಕಬೇಕು. ಯಾರೋ ಒಬ್ಬರು ದೂರು ದಾಖಲಿಸಿದರು ಅಂತ ಸುಮ್ಮನೆ ಎಫ್‌ಐಆರ್ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗಿದೆ. ಇನ್ನಷ್ಟು ವಿವರವಾದ ಮಾಹಿತಿಗಳನ್ನು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.