ಗುಜರಾತ್‌ನ ರಾಜ್‌ಕೋಟ್‌ನಲ್ಲಿ ರೈಲಿನಿಂದ ಪ್ರಯಾಣಿಕರು ಎಸೆದ ನೀರಿನ ಬಾಟಲಿ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕನ ಎದೆಗೆ ಬಡಿದು ಮೃತಪಟ್ಟಿದ್ದಾನೆ. 14 ವರ್ಷದ ಬಾದಲ್ ಸಂತೋಷ್‌ಭಾಯ್ ಠಾಕೂರ್ ಮೃತ ಬಾಲಕ. ಸ್ನೇಹಿತನ ಜೊತೆ ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ.
ವೆರಾವಲ್-ಬಾಂದ್ರಾ ಟರ್ಮಿನಸ್ ರೈಲಿನ ಮೊದಲ ಬೋಗಿಯಲ್ಲಿದ್ದ ಪ್ರಯಾಣಿಕನೊಬ್ಬ ವೇಗವಾಗಿ ಬರುತ್ತಿದ್ದ ರೈಲಿನಿಂದ ರೈಲು ಹಳಿಗಳ ಕಡೆಗೆ ನೀರು ತುಂಬಿದ್ದ ಬಾಟಲನ್ನು ಎಸೆದಿದ್ದು, ಅದು ಬಾಲಕನ ಎದೆಗೆ ಬಡಿದಿದೆ. ಕೂಡಲೇ ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಜ್‌ಕೋಟ್‌ನ ವೆರಾವಲ್‌ನಿಂದ ಮುಂಬೈನ ಬಾಂದ್ರಾಗೆ ಹೋಗುತ್ತಿದ್ದ ರೈಲು ಇದಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶಾಪರ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿಗೆ ನಿಖರ ಕಾರಣ ಏನು ಎಂಬ ಬಗ್ಗೆ ತಿಳಿಯುವ ಪ್ರಯತ್ನ ನಡೆಯುತ್ತಿದೆ.
ಬಾದಲ್ ಸಂತೋಷ್‌ಭಾಯ್ ಠಾಕೂರ್ ಪೋಷಕರಿಗಿದ್ದ ಒಬ್ಬನೇ ಪುತ್ರನಾಗಿದ್ದು, ಮೂಲತಃ ಮಧ್ಯಪ್ರದೇಶದವರಾದ ಇವರು 2 ವರ್ಷಗಳ ಹಿಂದೆ ಗುಜರಾತ್‌ಗೆ ಬಂದು ಫ್ಯಾಬ್ರಿಕ್ ಉದ್ಯಮವನ್ನು ರಾಜ್‌ಕೋಟ್‌ನಲ್ಲಿ ನಡೆಸುತ್ತಿದ್ದರು.