ಉದಯಕಾಲ ದಿನಪತ್ರಿಕೆಯ ಯುಗಾದಿ ವಿಶೇಷಾಂಕವನ್ನು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಸದಾಶಿವನಗರದ ನಿವಾಸದಲ್ಲಿ ಬಿಡುಗಡೆ ಮಾಡಿದರು.
ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಬಿ ಬಸವರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ೨೭ ವರ್ಷಗಳಿಂದ ಹೊರಬರುತ್ತಿರುವ ‘ಕನ್ನಡಿಗರ ಜೀವಾಳ’ ಎನ್ನುವ ಘೋಷವಾಕ್ಯ ಹೊಂದಿರುವ ದಿನ ಪತ್ರಿಕೆ ‘ಉದಯಕಾಲ’. ಶಿವಮೊಗ್ಗ, ಕಲಬುರಗಿ, ಬೆಂಗಳೂರು, ಬೆಳಗಾವಿ, ಮಂಡ್ಯ, ಹುಬ್ಬಳ್ಳಿ – ಧಾರವಾಡ ಜಿಲ್ಲೆಗಳಿಂದ ಏಕಕಾಲಕ್ಕೆ ಪ್ರಕಟವಾಗಿ ಹೊರಬರುತ್ತಿದೆ.
ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ವಿಶೇಷ ಅಂಕಣಗಳು, ಸಿನೆಮಾ, ಕ್ರೀಡಾ ಸುದ್ದಿಗಳು ಪ್ರಕಟವಾಗುತ್ತಿವೆ. ಕರ್ನಾಟಕ ಪ್ರಸರಣ ಪ್ರಮಾಣ ಪತ್ರ ಸದಸ್ಯತ್ವ ಪಡೆದ ಪತ್ರಿಕೆ ಇದಾಗಿದೆ.