Tuesday, September 02, 2025
Menu

ಯುಗಾದಿಗೆ ಕಿರುತೆರೆ ಮೇಲೆ ಪ್ರಪಥಮ ಬಾರಿಗೆ `ಯುಐ’ ಪ್ರದರ್ಶನ

uppendra

ಬೆಂಗಳೂರು: ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಹೊಚ್ಚಹೊಸ ಚಲನಚಿತ್ರ ‘UI’ ಮೊಟ್ಟಮೊದಲ ಬಾರಿಗೆ ನಿಮ್ಮ ಜೀ಼ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 4:30 ಕ್ಕೆ ಪ್ರಸಾರ ಆಗಲಿದೆ.

ತಾವೇ ನಿರ್ದೇಶನ ಮಾಡಿದ UI ಚಿತ್ರದಲ್ಲಿ ಉಪೇಂದ್ರ ಅವರು ಕಲ್ಕಿ ಮತ್ತು ಸತ್ಯ ಎಂಬ ಪಾತ್ರವನ್ನು ನಿರ್ವಹಿಸಿದ್ದು ಅವರಿಗೆ ರೀಷ್ಮಾ ನಾಣಯ್ಯ ಅವರು ಜೋಡಿಯಾಗಿದ್ದಾರೆ. ಅಷ್ಟೇ ಅಲ್ಲದೆ, ರವಿಶಂಕರ್, ಸಾಧುಕೋಕಿಲ , ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಹಾಗು ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಉಪೇಂದ್ರ ಸತ್ಯ ಮತ್ತು ಕಲ್ಕಿ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ಈ ಸಿನೆಮಾದಲ್ಲಿ ‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ’ ಎಂಬ ಉಪ್ಪಿಯ ಲೈನ್ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿನಂತೆ ಈ ಸಿನಿಮಾದಲ್ಲಿ ಉಪೇಂದ್ರ ಹೇಳದೇ ಇರುವ ವಿಚಾರಗಳೇ ಇಲ್ಲ. ದೇವರು, ಜಾತಿ, ಧರ್ಮ, ಪ್ರಕೃತಿ, ಸಮಾಜ, ಮಹಿಳೆ, ಬುದ್ಧ, ಬಸವ, ಭ್ರಷ್ಟಾಚಾರ, ಕಲ್ಕಿ ಯುಗ & ಸತ್ಯ ಯುಗ, ಭವಿಷ್ಯ, ಕೊನೆಗೆ ಸಾಮಾಜಿಕ ಜಾಲತಾಣಗಳನ್ನೂ ಕೂಡ ಉಪ್ಪಿ ಬಿಟ್ಟಿಲ್ಲ. ಇಡೀ ಸಿನಿಮಾದಲ್ಲಿ ಇವೆಲ್ಲವೂ ಒಂದಲ್ಲಾ ಒಂದು ಕಡೆ ಬಂದು ತಮ್ಮ ಇರುವಿಕೆಯನ್ನು ತೋರಿಸಿಕೊಟ್ಟು ಹೋಗುತ್ತವೆ.

ಸಿನೆಮಾದೊಳಗೆ ಮತ್ತೊಂದು ಸಿನೆಮಾದ ಕಥೆಯೇ UI. ಇಲ್ಲಿ ಸತ್ಯ ನ್ಯಾಯದ ಪರ ಹೋರಾಡಿದರೆ, ಕಲ್ಕಿ ಅನ್ಯಾಯದ ಪರ ಹೋರಾಡುತ್ತಾನೆ. ಫೋಕಸ್ ಮಾಡಿದರೆ ಮಾತ್ರಾ ಅರ್ಥವಾಗುತ್ತದೆ ಎಂಬ ಪ್ರೇಕ್ಷಕರ ಮಾತನ್ನು ಕೇಳಿದ ಚಿತ್ರವಿಮರ್ಶಕ ಈ ಚಿತ್ರಕ್ಕೆ ವಿಮರ್ಶೆ ಬರೆಯಲಾಗದೆ ಒದ್ದಾಡುತ್ತಾನೆ. ಕೊನೆಗೆ ಆ ಚಿತ್ರದ ನಿರ್ದೇಶಕನನ್ನು ಹುಡುಕಿಕೊಂಡು ಹೋಗಿ ಆತನನ್ನು ಭೇಟಿಯಾಗಿ ಚಿತ್ರದ ಒಳಾರ್ಥ ತಿಳಿಯಲು ನಿರ್ಧರಿಸುತ್ತಾನೆ. ಆದರೆ ದೊಡ್ಡ ಟ್ವಿಸ್ಟ್ ಏನೆಂದರೆ ಅಲ್ಲಿ ವಿಮರ್ಶಕನಿಗೆ ಚಿತ್ರದ ನಿರ್ದೇಶಕ ಸಿಗುವುದಿಲ್ಲ ಬದಲಾಗಿ ಸುಟ್ಟುಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಇದರಿಂದ ವಿಮರ್ಶಕನ ಗೊಂದಲ ಮತ್ತಷ್ಟು ಜಾಸ್ತಿ ಆಗುತ್ತದೆ.
ಯುಗಾದಿ ಹಬ್ಬದ ಪ್ರಯುಕ್ತ ಪ್ರಸಾರ ಆಗುವ UI ಸಿನೆಮಾ ನೋಡಿ, ವಾಚ್ ಅಂಡ್ ವಿನ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿ 10 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಿ. ಈ ಕಾಂಟೆಸ್ಟ್ ಮಾರ್ಚ್ 30 ರಿಂದ ಶುರುವಾಗಿ ಏಪ್ರಿಲ್ 6 ರ ವರೆಗೆ ನಡೆಯಲಿದ್ದು ಪ್ರತಿ ಅರ್ಧ ಗಂಟೆಗೆ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ 3 ಅದೃಷ್ಟಶಾಲಿಗಳಿಗೆ ಉಡುಗೊರೆ ಮತ್ತು ಒಬ್ಬ ಅದೃಷ್ಟಶಾಲಿಗೆ ಸಿಗಲಿದೆ ಬಂಪರ್ ಬಹುಮಾನ. ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ನಿಮ್ಮದಾಗಿಸಿಕೊಳ್ಳಿ.
ಚಿತ್ರವಿಮರ್ಶಕ ಚಿತ್ರವನ್ನು ವಿಮರ್ಶೆ ಮಾಡುವಲ್ಲಿ ಯಶಸ್ವೀ ಆಗುತ್ತಾನಾ? ‘UI’ ಎಂದರೇನು? ಇದೆಲ್ಲದಕ್ಕೂ ಉತ್ತರ ತಿಳಿದುಕೊಳ್ಳಲು ವೀಕ್ಷಿಸಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ‘UI’ ಭಾನುವಾರ ಸಂಜೆ 4:30 ಕ್ಕೆ ಜೀ಼ ಕನ್ನಡ ವಾಹಿನಿಯಲ್ಲಿ.

Related Posts

Leave a Reply

Your email address will not be published. Required fields are marked *