ರಾಜ್ಯದಲ್ಲಿ ಏಪ್ರಿಲ್ 1ರಿಂದ ಹಾಲು, ಮೊಸರು ಸೇರಿದಂತೆ ಎಲ್ಲಾ ನಂದಿನಿ ಉತ್ಪನ್ನಗಳ ದರ ಏರಿಕೆ ಜಾರಿಗೆ ಬರಲಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆಗೆ ಅನುಮೋದನೆ ದೊರೆತ ನಂತರ ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿಯ ಎಲ್ಲಾ ಉತ್ಪನ್ನಗಳ ಬೆಲೆ ಲೀಟರ್ ಗೆ 4 ರೂ. ಏರಿಕೆ ಜಾರಿಗೆ ಬರಲಿದೆ ಎಂದರು.
ಜೂನ್ 26, 2024ರಂದು ಹಾಲಿನ ದರ 2 ರೂ. ಏರಿಕೆ ಮಾಡಲಾಗಿತ್ತು. ಆದರೆ ನಂತರ ದರ ಏರಿಕೆ ವಾಪಸ್ ಪಡೆಯಲಾಗಿತ್ತು. ಇದೀಗ ಹಾಲು ಉತ್ಪನ್ನ ಹಾಗೂ ನಿರ್ವಹಣೆ ವೆಚ್ಚ ಸರಿದೂಗಿಸಲು ಲೀಟರ್/ ಕೆಜಿಗೆ 4 ರೂ. ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.
ನಂದಿನಿ ಹಾಲಿನ ದರ ಏರಿಕೆ ವಿವರ
ಟೋನ್ಡ್ ಹಾಲು: ಲೀಟರ್‌ಗೆ 46 ರೂ. (ಹಿಂದಿನ ದರ 42 ರೂ.)
ಹೋಮೋಜನೈಸ್ಡ್ ಟೋನ್ಡ್ ಹಾಲು: ಲೀಟರ್‌ಗೆ 47 ರೂ (ಹಿಂದಿನ ದರ 43 ರೂ.)
ಹಸುವಿನ ಹಾಲು (ಹಸಿರು ಪ್ಯಾಕೆಟ್): ಲೀಟರ್‌ಗೆ 50 ರೂ (ಹಿಂದಿನ ದರ 46 ರೂ.)
ಶುಭಮ್ ಹಾಲು: ಲೀಟರ್‌ಗೆ 52 ರೂ (ಹಿಂದಿನ ದರ 48 ರೂ.)
ಮೊಸರು: ಲೀಟರ್‌ಗೆ 54 ರೂ (ಹಿಂದಿನ ದರ 50 ರೂ.)