ದಾವಣಗೆರೆ ನಗರದ ಬಿಐಇಟಿ ರಸ್ತೆಯ ಈಶ್ವರ ಧ್ಯಾನ ಮಂದಿರದ ಬಳಿ ಕಾರು ಚಾಲನೆ ಮಾಡುವಾಗ ಚಾಲಕ ಹೃದಯಸ್ತಂಭನಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಏಕಾಏಕಿ ಹೃದಯಸ್ತಂಭನಗೊಂಡ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ್ ಪೈ(42) ಸ್ಥಳದಲ್ಲೇ ಅಸು ನೀಗಿದ್ದಾರೆ.
ಈ ವೇಳೆ ಸುರೇಶ್ ಅವರಿಗೆ ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಸ್ಥಳದಲ್ಲಿದ್ದವರು ಸುರೇಶ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ದಕ್ಷಿಣ ವಿಭಾಗದ ಸಂಚಾರಿ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.