Menu

ಬೆಂಗಳೂರಿನಲ್ಲಿ ರಿಕವರಿ ಚಿನ್ನ ಗುಳುಂ ಮಾಡಿದ ಪಿಎಸ್‌ಐಯಿಂದ ವ್ಯಾಪಾರಿಗೂ 950 ಗ್ರಾಂ ಚಿನ್ನ ವಂಚನೆ

ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಚಿನ್ನವನ್ನು ದುರ್ಬಳಕೆ ಮಾಡಿಕೊಂಡು, ಬಳಿಕ ಚಿನ್ನದ ಅಂಗಡಿ ಮಾಲೀಕನ ಬಳಿ ರಿಕವರಿ ಚಿನ್ನ ತೋರಿಸಬೇಕಿದ್ದು ಫೋಟೋ ತೆಗೆಸಿ ವಾಪಸ್ ಕೊಡುತ್ತೇನೆ ಎಂದು ಹೇಳಿ 950 ಗ್ರಾಂ ಚಿನ್ನದ ಗಟ್ಟಿಯನ್ನು ಪಡೆದುಕೊಂಡು ವಂಚಿಸಿದ್ದ ಕಾಟನ್​​ಪೇಟೆ ಠಾಣೆ ಪಿಎಸ್​ಐ ಸಂತೋಷ್ ವಿರುದ್ಧ ಎಫ್​​ಐಆರ್​​​ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್​ ಆಯುಕ್ತರು ಅಮಾನತು ಮಾಡಿದ್ದಾರೆ.

2020ರಲ್ಲಿ ಹಲಸೂರು ಗೇಟ್ ಠಾಣೆ ಪಿಎಸ್​ಆರ್ ಆಗಿದ್ದ ಸಂತೋಷ್ ಪ್ರಕರಣವೊಂದರ ರಿಕವರಿ ಚಿನ್ನ ದುರ್ಬಳಕೆ ಮಾಡಿಕೊಂಡಿದ್ದರು. ವ್ಯಾಪಾರಿಯಿಂದ ಪೋಟೊಗೆಂದು 950 ಗ್ರಾಂ ಚಿನ್ನದ ಗಟ್ಟಿ‌ಯನ್ನು ಪಡೆದ ಪಿಎಸ್​ಐ ಸಂತೋಷ್‌, ಚಿನ್ನ ವಾಪಸ್ ಕೇಳಿದಾಗ ವ್ಯಾಪಾರಿಗೆ ಹಣ ನೀಡುತ್ತೇನೆಂದು ಹೇಳಿ ಭದ್ರತೆಗೆ ನಿವೇಶನ​ ಕರಾರು ಮಾಡಿಕೊಟ್ಟಿದ್ದರು.

ಆದರೆ ನಿವೇಶನವನ್ನು ಸಂತೋಷ್ ಬೇರೆಯವರಿಗೆ ಮಾರಿದ್ದರು. ವ್ಯಾಪಾರಿ ಮತ್ತೆ ಪಿಎಸ್​ಐಯನ್ನು ಪ್ರಶ್ನಿಸಿದಾಗ, ವ್ಯಾಪಾರಿಗೆ ಖಾಲಿ ಚೆಕ್ ನೀಡಿದ್ದರು. ಚೆಕ್​ ಬೌನ್ಸ್ ಆಗಿತ್ತು. ಮತ್ತೆ ಹಣ ಅಥವಾ ಚಿನ್ನ ಕೇಳಿದಾಗ ಪಿಎಸ್ಐ ಬೆದರಿಕೆ ಹಾಕಿದ್ದರು.

ಈ ಬಗ್ಗೆ ಚಿನ್ನದ ವ್ಯಾಪಾರಿ ಪಶ್ಚಿಮ ವಿಭಾಗ ಡಿಸಿಪಿಗೆ ದೂರು‌ ನೀಡಿದ್ದರು. ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ‌ ವಿಚಾರಣೆ ನಡೆಸಿ ವರದಿ ಸಲ್ಲಿಕೆಯಾಗಿದೆ. ಪ್ರಾಥಮಿಕ ವರದಿ ಆಧಾರದ ಮೇಲೆ ಪಿಎಸ್​ಐ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಹಲಸೂರು ಗೇಟ್ ಠಾಣೆಯಲ್ಲಿ ಪಿಎಸ್​ಐ ಸಂತೋಷ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಕೇಸ್ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *