Menu

ಐಪಿಎಲ್ 2025ಗೆ ವರ್ಣರಂಜಿತ ಉದ್ಘಾಟನೆ: ಕೊಹ್ಲಿಗೆ ಸನ್ಮಾನ

disha patani

ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿಯ ಟಿ-20 ಟೂರ್ನಿಗೆ ವರ್ಣರಂಜಿತ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಲಾಯಿತು.

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸತತ 18 ಆವೃತ್ತಿಗಳಲ್ಲಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಸನ್ಮಾನಿಸಿದರು.

ಇದೇ ವೇಳೆ ಶಾರೂಖ್ ಖಾನ್ ಜೊತೆ ಕೊಹ್ಲಿ ಮತ್ತು ಕೆಕೆಆರ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ರಿಂಕು ಸಿಂಗ್ ವೇದಿಕೆ ಮೇಲೆ ನೃತ್ಯ ಮಾಡಿ ರಂಜಿಸಿದರು.

ಉದ್ಘಾಟನಾ ಸಮಾರಂಭವನ್ನು ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ನಡೆಸಿಕೊಟ್ಟರೆ, ನಟಿ ದಿಷಾ ಪಟಾನಿ ನೃತ್ಯದ ಮನರಂಜಿಸಿದರೆ, ಗಾಯಕಿ ಶ್ರೇಯಾ ಘೋಷಲ್ ಜನಪ್ರಿಯ ಹಾಡುಗಳನ್ನು ಹಾಡಿದರು.

Related Posts

Leave a Reply

Your email address will not be published. Required fields are marked *