ಕೋಲ್ಕತಾ: ರಾಯಲ್ ಚಾಲೆಂಜರ್ಸ್ (ಆರ್‌ಸಿ) ಫ್ರಾಂಚೈಸಿ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಿರೀಟಕ್ಕಾಗಿ ತನ್ನ 18ನೇ ಪ್ರಯತ್ನವನ್ನು ಪ್ರಾರಂಭಿಸುತ್ತಿದ್ದಂತೆ ಶಿಬಿರದಲ್ಲಿ ಉತ್ಸಾಹದ ಅಲೆ ಇದೆ.
ಇನ್ನೂ ಐಪಿಎಲ್ ಗೆಲ್ಲದ ಮೂರು ತಂಡಗಳಲ್ಲಿ ಒಂದಾದ ಆರ್‌ಸಿ, ಐಪಿಎಲ್ 2025 ಗಾಗಿ ರಜತ್ ಪಾಟಿದಾರ್‌ರಲ್ಲಿ ಹೊಸ ನಾಯಕನನ್ನು ಹೊಂದಿದೆ.
ಕಳೆದ ಮೂರು ಋತುಗಳಲ್ಲಿ ಎರಡು ಬಾರಿ ಪ್ಲೇಆಫ್‌ಗೆ ಕೊಂಡೊಯ್ದಿದ್ದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಂದ ರಜತ್ ನಾಯಕತ್ವದ ಮೊಗ ಪಡೆದಿದ್ದಾರೆ.
ಮಾರ್ಚ್ ೨೨ ರಂದು ಈಡನ್ ಗಾರ್ಡನ್ಸಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಆರ್‌ಸಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಐಪಿಎಲ್ ೨೦೨೫ ರ ಋತುವಿಗೆ ಮುಂಚಿತವಾಗಿ, ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚೆಲೆಂಜರ್ಸ್ ತಂಡವನ್ನು ಹೀಗೆ ವಿಶ್ಲೇಷಿಸಿಬಹುದು:
ಬಲಾಬಲ: ಆರ್‌ಸಿಯ ಬ್ಯಾಟಿಂಗ್ ಯಾವಾಗಲೂ ಅದರ ಶಕ್ತಿಯಾಗಿದೆ. ಕೆಕೆಆರ್‌ನ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆಯಿದೆ.
ಮಧ್ಯಮ ಕ್ರಮಾಂಕದಲ್ಲಿ ರಜಂತ್, ದೇವದತ್ ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಯುವ ಆಟಗಾರ ಜೇಕಬ್ ಬೆತೆಲ್ ಅವರಂತಹ ಉತ್ತಮ ಹೊಡಿಬಡಿ ಆಟಗಾರರರಿದ್ದಾರೆ.
ದೌರ್ಬಲ್ಯಗಳು: ಬೌಲಿಂಗ್ ಆರ್‌ಸಿಯ ದೀರ್ಘಕಾಲದ ಬಗೆಹರಿಯದ ಸಮಸ್ಯೆಯಾಗಿದೆ. ಕಳೆದ ಋತುವಿಗೆ ಹೋಲಿಸಿದರೆ ಆರ್‌ಸಿಯ ವೇಗದ ದಾಳಿ ಉತ್ತಮವಾಗಿ ಕಾಣುತ್ತಿದೆ.
ಅನುಭವಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್ವುಡ್ ಮಿಶ್ರಣ ಆಶಾದಾಯಕವಾಗಿದ್ದರು ನುರಿತ ಲೆಗ್ ಸ್ಪಿನ್ನರ್ ಕೊರತೆ ತಂಡದ ಒಟ್ಟಾರೆ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಅವಕಾಶಗಳು: ನಾಯಕತ್ವ ವಹಿಸಿಕೊಂಡ ನಂತರ, ಪಾಟೀದಾರ್ ಪಂದ್ಯಾವಳಿಯಲ್ಲಿ ತಮ್ಮ ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಈಗ ಅವರ ಹೆಗಲೇರಿದೆ. ಆರ್‌ಸಿಯೊಂದಿಗೆ ಐಪಿಎಲ್ ಎತ್ತಿಹಿಡಿದ ಮೊದಲ ನಾಯಕ ಎಂಬ ಹೆಗ್ಗಳಿಕೆ ಈಗ ಅವರ ಕೈಗೆಟುಕುವ ದೂರದಲ್ಲಿದೆ.
ಇದಲ್ಲದೆ, ವೇಗಿ ಯಶ್ ದಯಾಳ್ ಈ ಋತುವಿನಲ್ಲಿ ತಂಡಕ್ಕೆ ವರವಾಗಬಲ್ಲ ಇನ್ನೊಬ್ಬ ಆಟಗಾರ. ಕಳೆದ ವರ್ಷ ತಂಡವು ಮೊದಲ ಏಳು ಪಂದ್ಯಗಳನ್ನು ಸೋತರೂ ಪ್ಲೇಆಫ್ ತಲುಪುವಲ್ಲಿ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು.
ಅಪಾಯ: ಪಾಟೀದಾರ್ ಅವರನ್ನು ನಾಯಕನನ್ನಾಗಿ ನೇಮಕ ಮಾಡುವುದು ತಪ್ಪಾಗಬಹುದು ಅಥವಾ ವಿಫಲವಾಗಬಹುದು. ಅದು ಕಾಲನಿರ್ಣಯಕ್ಕೆ ಬಿಟ್ಟ ವಿಚಾರ.
ಐಪಿಎಲ್‌ನಲ್ಲಿ ಅವರು ನಾಯಕತ್ವದ ಅನುಭವದಿಂದ ವಂಚಿತರಾಗಿದ್ದರೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್‌ಗೆ ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ್ದಾರೆ. ಇದಲ್ಲದೆ, ಆರ್‌ಸಿ ಗುಣಮಟ್ಟದ ಮೊದಲ ಇಲೆವೆನ್ ಅನ್ನು ಹೊಂದಿದೆ, ಆದರೆ ಬೆಂಚ್ ಸಾಮರ್ಥ್ಯದ ವಿಷಯಕ್ಕೆ ಬಂದಾಗ ಹೆಚ್ಚಿನ ಆಯ್ಕೆಗಳಿಲ್ಲ.
ಆರ್‌ಸಿ ಪ್ರಬಲ ಇಲೆವೆನ್: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ (ವಿಕೆ), ರಜತ್ ಪಾಟಿದಾರ್ (ಸಿ), ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್, ಯಶ್ ದಯಾಳ್.
ಇಂಪ್ಯಾಕ್ಟ್ ಆಟಗಾರರು: ಸುಯಾಶ್ ಶರ್ಮಾ, ರಸಿಕ್ ಸಲಾಮ್, ಸ್ವಪ್ನಿಲ್ ಸಿಂಗ್\