Menu

ತೆರಿಗೆ ಹಾಗೂ ಸಂಪನ್ಮೂಲ ಹಂಚಿಕೆಯಲ್ಲಿ ಕೇಂದ್ರದ ದ್ರೋಹದಿಂದ ರಾಜ್ಯಕ್ಕೆ ಹಣಕಾಸಿನ ಕೊರತೆ 

​ವಿರೋಧ ಪಕ್ಷದವರು ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಎರಡು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಒಂದು, ತೆರಿಗೆ ಸಂಗ್ರಹಣೆ ಸಮರ್ಪಕವಾಗಿಲ್ಲ ಎಂದಾದರೆ ಇನ್ನೊಂದು ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಹಣಕಾಸಿನ ಪರಿಸ್ಥಿತಿ ಕ್ಲಿಷ್ಟಕರವಾಗಿದೆ ಎಂದು ವ್ಯಾಖ್ಯಾನಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಉತ್ತರಿಸಿ, ವಾಸ್ತವ ಸಂಗತಿಗಳು ಬೇರೆಯದೆ ಆಗಿವೆ. ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ ಹಾಗೂ ಸಂಪನ್ಮೂಲ ಹಂಚಿಕೆೆಯಲ್ಲಿ ಮಾಡಿದ ದ್ರೋಹ ಮೊದಲ ಕಾರಣವಾದರೆ, ಎರಡನೆಯದಾಗಿ ಹಿಂದೆ ಆಡಳಿತ ನಡೆಸಿದ್ದ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಆರ್ಥಿಕ ಅಶಿಸ್ತು ಹಾಗೂ ಅರಾಜಕ ಆಡಳಿತದಿಂದಾಗಿ ಸಮಸ್ಯೆಗಳು ಉದ್ಭವಿಸಿವೆ. ಈ ಎರಡನ್ನೂ ಬಚ್ಚಿಡಲು ವಿರೋಧ ಪಕ್ಷದ ವರು ಜನರಿಗೆ ನೀಡುತ್ತಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಹಾಗೂ ಅದನ್ನು ಅನುಷ್ಠಾನ ಮಾಡುತ್ತಿರುವ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ರಾಜ್ಯದ ಆರ್ಥಿಕತೆಯ ಬಗ್ಗೆ ಕಿಂಚಿತ್ತಾದರೂ ತಿಳುವಳಿಕೆ ಇರುವವರು ವರ್ತಿಸುವ ರೀತಿ ಇದಲ್ಲ ಎಂದು ಹೇಳಿದ್ದಾರೆ.

​2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.42 ಲಕ್ಷ ಕೋಟಿ ರೂ.ಇದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ 46,288 ಕೋಟಿ ರೂ. ಬಂದಿತ್ತು. ಈಗ ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಮೀರಿದೆ. 2018-19 ಕ್ಕೆ ಹೋಲಿಸಿದರೆ ಶೇ.100 ರಷ್ಟು ಹೆಚ್ಚಾಗಿದೆ. ಆ ಲೆಕ್ಕಕ್ಕೆ ಹೋಲಿಸಿದರೆ 2025-26ನೆ ಸಾಲಿಗೆ ನಮಗೆ ಕನಿಷ್ಠ 1 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ ಅನುದಾನ ಬರಬೇಕಾಗಿತ್ತು. ಆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಒಂದು ನಮಗೆ ಸಮರ್ಪಕವಾಗಿ ತೆರಿಗೆ ಪಾಲೂ ಸಿಗುತ್ತಿಲ್ಲ. ಯೋಜನೆಗಳನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ವಿವರಿಸಿದ್ದಾರೆ.

​ಕರ್ನಾಟಕಕ್ಕೆ 14 ನೇ ಹಣಕಾಸು ಆಯೋಗವು ಶೇ. 4.71 ರಷ್ಟು ತೆರಿಗೆ ಪಾಲು ನೀಡಿತ್ತು. ಆದರೆ 15 ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಸಿದರು. ಶೇ.23 ರಷ್ಟು ಕುಸಿತವಾಯಿತು. ಇದರಿಂದ ಪ್ರತಿ ವರ್ಷ 12 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದಷ್ಟೆ ಅಲ್ಲದೆ 15 ನೇ ಹಣಕಾಸು ಆಯೋಗವು 5,495 ಕೋಟಿ ರೂ.ವಿಶೇಷ ಅನು ದಾನ ಕೊಡಲು ಶಿಫಾರಸ್ಸು ಮಾಡಿತ್ತು. ಕೆರೆಗಳ ಅಭಿವೃದ್ಧಿಗೆ 3000 ಕೋಟಿ ಹಾಗೂ ಫೆರಿಫೆರಲ್ ರಿಂಗ್ ರಸ್ತೆ ಅಭಿ ವೃದ್ಧಿಗೆ 3000 ಕೋಟಿ ರೂ ಶಿಫಾರಸ್ಸು ಮಾಡಿತ್ತು. ಅದನ್ನೂ ಕೊಡಲಿಲ್ಲ. ಹಾಗೆಯೇ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿಗಳನ್ನು ಕೊಡುತ್ತೇನೆ ಎಂದು ಹೇಳಿ ಕೊಡದೆ ದ್ರೋಹ ಮಾಡಿದೆ. ವಿರೋಧ ಪಕ್ಷದವರು ಮೋದಿ ಸರ್ಕಾ ರದ ದ್ರೋಹವನ್ನು ಸಮರ್ಥಿಸುತ್ತಾರೆ ಎಂದು ಸಿಎಂ ಹೇಳಿದರು.

ಪ್ರಮುಖ ರಾಜ್ಯಗಳ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವಿವರ
.​ವಿರೋಧ ಪಕ್ಷದವರು ಕೇಂದ್ರದಿಂದ ವ್ಯಾಪಕ ಪ್ರಮಾಣದಲ್ಲಿ ಅನುದಾನಗಳನ್ನು ರಾಜ್ಯಕ್ಕೆ ತಂದು ರಾಜ್ಯದ ಹೆದ್ದಾರಿ ಹಾಗೂ ರೈಲ್ವೆ ಯೋಜನೆಗಳಿಗೆ ನೀಡಲಾಗಿದೆ ಎಂದು ಮೋದಿ ಸರ್ಕಾರವನ್ನು ಸಮರ್ಥಿಸುತ್ತಾರೆ. ಡಿಸೆಂಬರ್-9, 2024 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ದಾಖಲೆಗಳ ಪ್ರಕಾರ ಸತ್ಯಾಂಶ ಈ ರೀತಿ ಇದೆ. 2004-05ರಲ್ಲಿ ನಿರ್ಮಿಸಿದ ರಸ್ತೆಯ ಕುರಿತು ಮಾಹಿತಿ ಆರ್.ಬಿ.ಐ., ದಾಖಲೆಗಳಲ್ಲಿಲ್ಲ. 9 ವರ್ಷಗಳಲ್ಲಿ ಕರ್ನಾಟಕದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ 2329 ಕಿ.ಮೀ. ರಸ್ತೆ ನಿರ್ಮಾಣ ಮಾಡಿತ್ತು. 2014 ರಿಂದ 2024 ರವರೆಗೆ 2014 ಕಿಮೀ ರಸ್ತೆಯನ್ನು ನಿರ್ಮಿಸಲಾಗಿದೆ. 2005 ರಿಂದ 2014 ರವರೆಗಿನ 9 ವರ್ಷಗಳಲ್ಲಿ ಸುಮಾರು 7 ವರ್ಷಗಳ ಕಾಲ ಕಾಂಗ್ರೆಸ್ಸೇತರ ಸರ್ಕಾರಗಳೆ ರಾಜ್ಯದಲ್ಲಿ ಆಡಳಿತ ನಡೆಸಿದ್ದವು. ಆದರೂ ಕೂಡ ಮನಮೋಹನ್ ಸಿಂಗ್ ಅವರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಅನುದಾನಗಳನ್ನು ಯಥೇಚ್ಛವಾಗಿ ಕೊಟ್ಟಿತ್ತು ಹಾಗೂ ಮೂಲಸೌಕರ್ಯ ನಿರ್ಮಾಣ ಮಾಡಲು ಶ್ರಮಿಸಿತ್ತು.

ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ 10 ವರ್ಷಗಳಲ್ಲಿ ಹಿಂದೆ ನಿರ್ಮಿಸಿದ್ದಕ್ಕಿಂತ ಕಡಿಮೆ ಉದ್ದದ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಆದರೆ, ಮಹಾರಾಷ್ಟçದಲ್ಲಿ 12,210 ಕಿ.ಮೀ., ಉತ್ತರ ಪ್ರದೇಶದಲ್ಲಿ 4306 ಕಿ.ಮೀ., ಗುಜರಾತ್ ನಲ್ಲಿ 3405 ಕಿ.ಮೀ., ರಾಜಸ್ಥಾನದಲ್ಲಿ 3060 ಕಿ.ಮೀ. ಉದ್ದದ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ.

​ರಾಜ್ಯಗಳಿಗೆ ಕೇಂದ್ರದಿಂದ ದೊರಕುತ್ತಿರುವ ತೆರಿಗೆ ಪಾಲು ಹಾಗೂ ಸಹಾಯಾನುದಾನ
​​ಬಜೆಟ್ ಗಾತ್ರದ ವಿಚಾರದಲ್ಲಿ ನಾವು ಉತ್ತರ ಪ್ರದೇಶ, ಮುಂತಾದ ರಾಜ್ಯಗಳ ಜೊತೆಗೆ ಹೋಲಿಸಿಕೊಳ್ಳುವುದಿಲ್ಲ.
​2024-25ರ ಬಜೆಟ್‌ನ ಅಂಕಿ ಅಂಶಗಳಿವು. ಪರಿಷ್ಕೃತ ಅಂದಾಜಿಗೆ ಹೋಗುವುದಿಲ್ಲ. ಉತ್ತರ ಪ್ರದೇಶದ ಒಟ್ಟು ಬಜೆಟ್ಟಿನಲ್ಲಿ ಶೇ.45 ರವರೆಗೆ ಕೇಂದ್ರ ಸರ್ಕಾರದ ತೆರಿಗೆ ಪಾಲು ಮತ್ತು ಸಹಾಯಾನುದಾನಗಳು ಲಭಿಸುತ್ತವೆ. ಮಧ್ಯಪ್ರದೇಶಕ್ಕೆ ಶೇ.40 ರವರೆಗೆ, ರಾಜಸ್ಥಾನಕ್ಕೆ ಶೇ.24 ರಷ್ಟು ಕೇಂದ್ರ ಸರ್ಕಾರದ ತೆರಿಗೆ ಪಾಲು ಮತ್ತು ಸಹಾಯಾನುದಾನಗಳು ಲಭಿಸುತ್ತವೆ. ಆದರೆ ಅಭಿವೃದ್ಧಿಯಲ್ಲಿ ಪ್ರತಿಸ್ಪರ್ಧಿಗಳಾಗಿರುವ ಕರ್ನಾಟಕ, ಮಹಾರಾಷ್ಟç, ಗುಜರಾತ್ ಮೂರು ರಾಜ್ಯಗಳ ಸ್ಥಿತಿ ಹೋಲಿಕೆ ಮಾಡಿದರೆ, ಮಹಾರಾಷ್ಟç ಶೇ.19.38, ಗುಜರಾತ್ ಶೇ.18.58 ರಷ್ಟಿದೆ,. ಆದರೆ ಕರ್ನಾಟಕ ಮಾತ್ರ ಕೇವಲ ಶೇ.16 ರಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಸಹಾಯಾನುದಾನಗಳನ್ನು ಪಡೆಯುತ್ತಿದೆ. ನಮಗೆ ಮಹಾರಾಷ್ಟçಕ್ಕೆ ಕೊಟ್ಟಿರುವ ಶೇ.19.38 ರಷ್ಟು ಪಾಲು ಕೊಟ್ಟಿದ್ದರೂ ಕೂಡ ಸುಮಾರು 72,000 ಕೋಟಿ ಸಿಗುತ್ತಿತ್ತು. ನಮಗೆ ಹೆಚ್ಚುವರಿಯಾಗಿ ಸುಮಾರು 12,000 ಕೋಟಿ ರೂ.ಗಳಷ್ಟು ಅನುದಾನಗಳು ಲಭ್ಯವಾಗುತ್ತಿದ್ದವು. ಆದರೆ, ದುರುದ್ದೇಶ ಪೂರ್ವಕವಾಗಿರುವುದರಿಂದ ಕರ್ನಾಟಕಕ್ಕೆ ಅನ್ಯಾಯ ಮಾಡಬೇಕಂತಲೇ ತೀರ್ಮಾನ ಮಾಡಿರುವುದರಿಂದ ಈ ರೀತಿ ಆಗುತ್ತಿದೆ.

​ರಾಜ್ಯಕ್ಕೆ ರಸ್ತೆಗಳಲ್ಲಿ, ರೈಲ್ವೆ ಯೋಜನೆಗಳಲ್ಲಿ, ಬಂದರು ಮುಂತಾದ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಮಹಾರಾಷ್ಟ, ಗುಜರಾತ್ ಮುಂತಾದ ರಾಜ್ಯಗಳಿಗೆ ಕೊಟ್ಟಷ್ಟು ಅನುದಾನಗಳನ್ನು ಕೊಡಲಿಲ್ಲ. ​ನೇರವಾಗಿ ನ್ಯಾಯ ಯುತವಾಗಿ ಬರಬೇಕಾದ ತೆರಿಗೆ ಪಾಲು, ಕೇಂದ್ರ ಸಹಾಯಾನುದಾನಗಳನ್ನು ಕಡಿಮೆ ಮಾಡಲಾಗುತ್ತಿದೆ. ​ಹಾಗಾಗಿ ಕರ್ನಾಟಕಕ್ಕೆ ಕೇಂದ್ರದಿಂದ ಅನುದಾನಗಳು ಬರದೆ ರಾಜ್ಯದ ಆರ್ಥಿಕ ಸ್ಥಿತಿ ಕ್ಲಿಷ್ಟಕರವಾಗಿರುವುದು ಒಂದು ರೀತಿಯ ದಾದರೆ, ಎರಡನೆಯದಾಗಿ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ನಡೆಸಿದ ಅರಾಜಕ ಸ್ಥಿತಿಗಳಿಂದಾಗಿ ಇನ್ನೊಂದು ರೀತಿಯ ಸಮಸ್ಯೆಗಳು ಉದ್ಭವಿಸಿವೆ.

ಪ್ರಮುಖ ಬಂಡವಾಳ ವೆಚ್ಚ ಮಾಡುವ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳನ್ನು ತೆಗೆದುಕೊಂಡು ಅನುದಾನ ಒದಗಿಸದೆ ಹೋಗಿದ್ದರು. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಇಷ್ಟು ಬೃಹತ್ ಮೊತ್ತದ ಕಾಮಗಾರಿಗಳಿಗೆ ಹಣ ಒದಗಿಸದೆ ಕಾಮಗಾರಿಗಳನ್ನು ತೆಗೆದುಕೊಂಡರೆ ಅವುಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ಲುಗಳನ್ನು ಪಾವತಿಸುವುದು ಹೇಗೆ? ಎಂಬ ಸಾಮಾನ್ಯ ತಿಳುವಳಿಕೆಯಾದರೂ ಇರಬೇಕಲ್ಲವೆ?

​ವಿದ್ಯುತ್ ಕಂಪನಿಗಳಿಗೆ ಬಾಕಿಯನ್ನು ಪಾವತಿಸುತ್ತಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಾಸ್ತವ ಏನೆಂದರೆ, ಹಿಂದಿನ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯುತ್ ಕಂಪನಿಗಳ ಬಲವರ್ಧನೆ ಮಾಡುವಲ್ಲಿ ವಿಫಲವಾಗಿತ್ತು. 5,258 ಕೋಟಿ ರೂ. ಗಳಷ್ಟು ಗ್ರಾಮ ಪಂಚಾಯತಿಗಳ ಬಾಕಿ ವಿದ್ಯುತ್ ಬಿಲ್ಲುಗಳನ್ನು ರಾಜ್ಯ ಸರ್ಕಾರವೇ ಪಿಸಿಕೆಎಲ್ ಮುಖಾಂತರ ಸಾಲ ಪಡೆದು ಪಾವತಿಸುತ್ತಿದೆ. ಇದರ ಜೊತೆ ಹಿಂದಿನ ಸರ್ಕಾರದ ವಿದ್ಯುತ್ ಕಂಪನಿಗಳಿಗೆ ನೀರಾವರಿ ಪಂಪ್‌ಸೆಟ್‌ಗಳಿಗೆ ಕೊಡಬೇಕಾದ ಸಹಾಯಧನವನ್ನು ಪಾವತಿಸದ ಕಾರಣ, ರಾಜ್ಯ ಸರ್ಕಾರವೇ 2024-25ನೇ ಸಾಲಿನಲ್ಲಿ 12,785 ಕೋಟಿ ರೂ. ಗಳ ಹಿಂದಿನ ವರ್ಷದ ಬಾಕಿಯನ್ನು ಪಾವತಿಸಲು ಪೂರಕ ಅಂದಾಜಿನಲ್ಲಿ 7,800 ಕೋಟಿ ಸೇರಿದಂತೆ ಒಟ್ಟಾರೆ 20,586 ಕೋಟಿ ರೂ. ಗಳ ಆರ್ಥಿಕ ನೆರವನ್ನು 2024-25 ನೇ ಸಾಲಿನಲ್ಲಿ ನಮ್ಮ ಸರ್ಕಾರ ನೀಡುತ್ತಿದೆ.

Related Posts

Leave a Reply

Your email address will not be published. Required fields are marked *