Menu

ಹಮಾಸ್‌ ಉಗ್ರರನ್ನು ಬೆಂಬಲಿಸುವ ಭಾರತೀಯ ಸಂಶೋಧಕ ಅಮೆರಿಕದಲ್ಲಿ ಅರೆಸ್ಟ್‌

ಹಮಾಸ್‌ ಉಗ್ರರಿಗೆ ಬೆಂಬಲ ವ್ಯಕ್ತಪಡಿಸಿದ್ದ ಭಾರತೀಯ ಸಂಶೋಧನಾ ವಿದ್ಯಾರ್ಥಿಯನ್ನು ಅಮೆರಿಕದ ವಲಸೆ ಅಧಿಕಾರಿಗಳು ಬಂಧಿಸಿದ್ದು ಗಡಿಪಾರುಗೊಳಿಸುವ ಸಾಧ್ಯತೆಯಿದೆ. ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಪೋಸ್ಟ್-ಡಾಕ್ಟರಲ್ ಫೆಲೋ ಬದರ್‌ ಖಾನ್ ಸೂರಿ ಬಂಧಿತ.

ಬದರ್‌ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಅಮೆರಿಕದಲ್ಲಿ ಹಮಾಸ್‌ ಉಗ್ರರ ಪರ ಪ್ರಚಾರ ನಡೆಸುತ್ತಿದ್ದು, ಶಂಕಿತ ಉಗ್ರರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಬದರ್‌ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿನಿಮಯ ವಿದ್ಯಾರ್ಥಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಹಮಾಸ್ ಪ್ರಚಾರ ಮಾಡುತ್ತಿದ್ದ ಮತ್ತು ಯೆಹೂದಿ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮೆಕ್‌ಲಾಫ್ಲಿನ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಡಾ. ಬದರ್ ಖಾನ್ ಸೂರಿ ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಎಡ್ಮಂಡ್ ಎ. ವಾಲ್ಷ್ ಸ್ಕೂಲ್ ಆಫ್ ಫಾರಿನ್ ಸರ್ವಿಸ್‌ನಲ್ಲಿರುವ ಅಲ್ವಲೀದ್ ಬಿನ್ ತಲಾಲ್ ಸೆಂಟರ್ ಫಾರ್ ಮುಸ್ಲಿಂ-ಕ್ರಿಶ್ಚಿಯನ್ ಅಂಡರ್‌ಸ್ಟಾಂಡಿಂಗ್‌ನಲ್ಲಿ ಪೋಸ್ಟ್‌ ಡಾಕ್ಟರಲ್ ಫೆಲೋ ಆಗಿದ್ದಾರೆ. 2020 ರಲ್ಲಿ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ನೆಲ್ಸನ್ ಮಂಡೇಲಾ ಸೆಂಟರ್ ಫಾರ್ ಪೀಸ್ ಅಂಡ್ ಕಾನ್ಫ್ಲಿಕ್ಟ್ ರೆಸಲ್ಯೂಷನ್‌ನಿಂದ ಶಾಂತಿ ಮತ್ತು ಸಂಘರ್ಷ ಅಧ್ಯಯನ ವಿಚಾರ ದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

Related Posts

Leave a Reply

Your email address will not be published. Required fields are marked *