Menu

ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಲೂಪ್

loop

ಚೆನ್ನೈ: ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಹೈಪರ್‌ಲೋಪ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಐಐಟಿ ಮದ್ರಾಸ್ ಮಾಡುತ್ತಿದೆ.

ಹೈಪರ್ಲೂಪ್‌ನ ವಾಣಿಜ್ಯ ಕಾರ್ಯಾಚರಣೆ ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸಲಾಗಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವೀಜಿನಾಥನ್ ಕಾಮಕೋಟಿ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಭಾರತೀಯ ರೈಲ್ವೇಯ ಧನಸಹಾಯದೊಂದಿಗೆ ಪ್ರಾರಂಭವಾದ ಹೈಪರ್ಲೂಪ್ ತಂತ್ರಜ್ಞಾನ ಸಂಶೋಧನೆ ಈಗ ಒಂದು ಹಂತಕ್ಕೆ ಬಂದಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲ ಪ್ರಗತಿಯ ಕುರಿತು ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ. ತೈಯೂರ್ ಕ್ಯಾಂಪಸ್‌ನಲ್ಲಿ 410-ಮೀಟರ್ ಪರೀಕ್ಷಾ ಟ್ರ್ಯಾಕ್ ಸ್ಥಾಪಿಸಲಾಗಿದೆ.

ಅಲ್ಲಿ ಮೂರು ವಿಭಿನ್ನ ಹೈಪರ್ಲೂಪ್ ಕಾರ್ಯಾಚರಣೆಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೈಪರ್‌ಲೂಪ್ ವೈಶಿಷ್ಟ್ಯ: ಮೊದಲನೆಯದಾಗಿ ಇದು ಪಾಡ್-ಆನ್-ಟ್ರ್ಯಾಕ್ ಮೋಡ್ ಆಗಿದ್ದು ಇದು 200 ಕಿ.ಮಿ. ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುವ ಟ್ರ್ಯಾಕ್‌ನಲ್ಲಿ ಓಡುವ ಕಾರಿನಂತೆಯೇ ಇರುತ್ತದೆ.

ಎರಡನೇ ಮೋಡ್ ಮ್ಯಾಗ್ನೆಟಿಕ್ ಲೆವಿಟೇಶನ್ ಅನ್ನು ಬಳಸುತ್ತದೆ, ಆಯಸ್ಕಾಂತಗಳನ್ನು ಬಳಸಿಕೊಂಡು ಟ್ರ್ಯಾಕ್‌ನ ಮೇಲೆ ಪಾಡ್ ಅನ್ನು ಸ್ವಲ್ಪ ಮೇಲಕ್ಕೆ ಎತ್ತುತ್ತದೆ, ಇದು 400 ಕಿಮಿ ವೇಗವನ್ನು ತಲುಪಬಹುದಾಗಿದೆ.

ಮೂರನೆಯ ಮತ್ತು ಅತ್ಯಾಧುನಿಕ ಮೋಡ್ ವ್ಯಾಕ್ಯೂಮ್ ಟ್ಯೂಬ್ ಮೋಡ್ ಆಗಿದೆ. ಇದರಲ್ಲಿ ಪಾಡ್ ಸಂಪೂರ್ಣವಾಗಿ ವ್ಯಾಕ್ಯೂಮ್ ಟ್ಯೂಬ್ ಮೂಲಕ ಪ್ರಯಾಣಿಸುತ್ತದೆ, ಇದು 600 ಕಿಮಿ ವೇಗವನ್ನು ಸಾಧಿಸುತ್ತದೆ. ಇನ್ನೊಂದು ಹಂತದಲ್ಲಿ ಇದು ಸಾವಿರ ಕಿಮೀ ವರೆಗೂ ಹೋಗಬಹುದು.

Related Posts

Leave a Reply

Your email address will not be published. Required fields are marked *