Menu

ಹಾಸನದಲ್ಲಿ ಹಾವನ್ನು ಕೊಂದು ಮಾಲೀಕನ ಜೀವವುಳಿಸಿ ಪ್ರಾಣ ತೆತ್ತ ನಾಯಿ

ಹಾಸನ ತಾಲೂಕಿನ ಕಟ್ಟಾಯ ಗ್ರಾಮದಲ್ಲಿ ಸಾಕು ನಾಯಿಯೊಂದು ಮನೆ ಮಾಲೀಕರು ಹಾಗೂ ಕೆಲಸಗಾರರ ಜೀವ ಉಳಿಸಲು ಪ್ರಾಣವನ್ನೇ ಪಣಕಿಟ್ಟು ಅಸು ನೀಗಿದೆ. ಸರ್ಪದ ಜತೆ ಕಾದಾಡಿದ ಪಿಟ್‌ಬುಲ್ ನಾಯಿಯ ಮುಖಕ್ಕೆ ಸರ್ಪ ಕಚ್ಚಿದ್ದರಿಂದ ಪ್ರಾಣ ಕಳೆದುಕೊಂಡಿದೆ.

ಶಮಂತ್ ಎಂಬವರು ತೋಟದಲ್ಲಿ ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳನ್ನು ಸಾಕಿದ್ದರು. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಹನ್ನೆರಡು ಅಡಿ ಉದ್ದದ ಸರ್ಪವೊಂದು ಮನೆಯ ಕಡೆಗೆ ಬಂದಿದೆ. ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದಾಗ ಬಂದ ಹಾವು ತೆಂಗಿನ ಗರಿಯ ಕೆಳಗೆ ಹೋಗಿದೆ. ಇದನ್ನು ಕಂಡ ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳು ಗರಿಯ ಕೆಳಗಿದ್ದ ಹಾವನ್ನು ಎಳೆದು ಅದರೊಂದಿಗೆ ಸೆಣಸಾಡಿವೆ.

ಈ ವೇಳೆ ಸರ್ಪ ಪಿಟ್‌ಬುಲ್ ನಾಯಿಯ ಮುಖಕ್ಕೆ ಕಚ್ಚಿದೆ, ಆದರೂ ಹಾವಿನೊಂದಿಗೆ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ನಾಯಿ ಕಾದಾಟ ನಡೆಸಿದೆ. ಸರ್ಪವನ್ನು ಕೊಂದು ತಾನು ಪ್ರಾಣಬಿಟ್ಟಿದೆ. ಭೀಮಾ ಹೆಸರಿನ ಈ ಪಿಟ್‌ಬುಲ್ ಶ್ವಾನ ಹಲವೆಡೆ ನಡೆದಿದ್ದ ಡಾಗ್ ಶೋನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿತ್ತು.

Related Posts

Leave a Reply

Your email address will not be published. Required fields are marked *