ಒಂಬತ್ತು ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಇಂದು ನಸುಕಿನಲ್ಲಿ 3.27ಕ್ಕೆ ಸುರಕ್ಷಿತವಾಗಿ ಭೂಮಿಗೆ ಕರೆತರಲಾಗಿದೆ.
ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮಂಗಳವಾರ ರಾತ್ರಿ 8.35ಕ್ಕೆ 400 ಕಿ.ಮೀ ದೂರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿ ಯತ್ತ ಪಯಣ ಆರಂಭಿಸಿತ್ತು. 17 ಗಂಟೆಗಳ ಪಯಣದ ಬಳಿಕ ಇಂದು ನಸುಕಿನ 3.27ರ ಸಮಯಕ್ಕೆ ಅಮೆರಿಕದ ಫ್ಲೋರಿಡಾ ಸಾಗರದಲ್ಲಿ ಲ್ಯಾಂಡ್ ಆಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 9 ತಿಂಗಳಿಂದ ಬೋಯಿಂಗ್ ಸ್ಟಾರ್‌ಲೈನರ್ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್ ಮತ್ತು ಇವರಿಬ್ಬರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಭೂಮಿಗೆ ಬಂದಿಳಿದಿದ್ದಾರೆ.
ಸ್ಪೇಸ್‌ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ‘ದಿ ಕ್ರ್ಯೂ-9 ಭೂಮಿಯ ಗುರುತ್ವಾಕರ್ಷಣೆಗೆ ಒಳಪಡುತ್ತಿದ್ದಂತೆಯೇ ವೇಗ ಕಡಿಮೆಮಾಡಿಕೊಂಡು ಕೆ ಸಮುದ್ರದತ್ತ ಧಾವಿಸುವಾಗ ಪ್ಯಾರಾಚೂಟ್‌ಗಳು ತೆರೆದುಕೊಂಡವು. ಮೊದಲಿಗೆ ಸ್ಪೇಸ್ ಎಕ್ಸ್‌ಡ್ರ್ಯಾಗನ್ ನೌಕೆಯನ್ನು ಸ್ಥಿರಗೊಳಿಸಲು ಎರಡು ಡ್ರೋಗ್ ಪ್ಯಾರಾಚೂಟ್‌ಗಳನ್ನು ತೆರೆಯಲಾಯಿತು. ಆ ನಂತರ ಲ್ಯಾಡಿಂಗ್ ಆಗಲೆಂದು ನೌಕೆಯ ವೇಗ ಮತ್ತಷ್ಟು ಕಡಿಮೆಮಾಡಲು ಪ್ರಮುಖ ನಾಲ್ಕು ಪ್ಯಾರಾಚೂಟ್‌ಗಳನ್ನು ತೆರೆಯಲಾಯಿತು. ಇದಾದ ಬಳಿಕ ನೌಕೆ ಸುರಕ್ಷಿತವಾಗಿ ಸಮುದ್ರಕ್ಕೆ ಅಪ್ಪಳಿಸಿತು. ಸಮುದ್ರಕ್ಕೆ ಬೀಳುತ್ತಿದ್ದಂತೆಯೇ ಸ್ಪೇಸ್ ಎಕ್ಸ್ ಕ್ರ್ಯೂಸ್‌ನ ಕ್ಯಾಪ್ಸುಲ್ ತೇಲಲು ಪ್ರಾರಂಭಿಸಿತು. ನೌಕೆಯ ಕ್ಯಾಪ್ಸುಲ್ ಸಮುದ್ರದಲ್ಲಿ ಬಿದ್ದು ತೇಲುತ್ತಿದ್ದಂತೆಯೇ ಮೂರು ಬೋಟ್‌ಗಳಲ್ಲಿ ಅಮೆರಿಕ ನೌಕಾಪಡೆ ಜೊತೆ ಸ್ಪೇಸ್ ಎಕ್ಸ್ನ ರಿಕವರಿ ಶಿಪ್ ಕೂಡ ಸ್ಥಳಕ್ಕೆ ಧಾವಿಸಿತು.
ನೌಕಾಪಡೆ ಸಿಬ್ಬಂದಿ ಮೊದಲಿಗೆ ಗಗನಯಾತ್ರಿಗಳಿದ್ದ ಕ್ಯಾಪ್ಸುಲ್ ನಿಯಂತ್ರಣಕ್ಕೆ ರೋಪ್‌ಗಳಿಂದ ಕಟ್ಟಿ ಹಡಗಿನ ಬಳಿಗೆ ಎಳೆದೊಯ್ದು ಕ್ಯಾಪ್ಸುಲ್ ಅನ್ನು ಹಡಗಿಗೆ ಸ್ಥಳಾಂತರ ಮಾಡಿದರು. ನಟ್ಟು, ಬೋಲ್ಟ್‌ಗಳಿಂದ ಟೈಟಾಗಿದ್ದ ಕ್ಯಾಪ್ಸುಲ್‌ನ ಡೋರ್ ತೆಗೆಯಲಾಯಿತು. ಮೊದಲಿಗೆ ನಾಸಾ ಗಗನಯಾತ್ರಿ ಹೇಗ್, ನಂತರ ರಷ್ಯಾದ ಗಗನನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಹೊರಗೆ ತರಲಾಯಿತು. ಮೂರನೆಯದಾಗಿ ಸುನೀತಾ ವಿಲಿಯಮ್ಸ್‌ರನ್ನು ಹೊರಗೆ ಕರೆತರಲಾ ಯಿತು. ಕೊನೆಯದಾಗಿ ಸುನೀತಾ ಜತೆಗಿದ್ದ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್‌ನ್ನು ಹೊರಗೆ ತರಲಾಯಿತು.
ಗಗನಯಾತ್ರಿಗಳನ್ನು ಅವರು ಧರಿಸಿದ್ದ ವಿಶೇಷ ಸ್ಪೇಸ್‌ಸೂಟ್‌ನಲ್ಲೇ ಹೆಲಿಕಾಪ್ಟರ್ ಮೂಲಕ ನಾಸಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಿ ಸಮಗ್ರವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ.