Menu
12

ಮತ ಮಾರಿಕೊಳ್ಳುವ ಮನಸ್ಥಿತಿ ದೇಶದ ಪ್ರಗತಿಗೆ ಮಾರಕ

ಬ್ಲರ್ಬ್: ಪ್ರಸ್ತುತ ದೇಶದಲ್ಲಿ ರಾಜಕಾರಣ ಉಚಿತ ಭಾಗ್ಯಗಳ ಮೂಲಕ ಜನರ ಮನಸ್ಸನ್ನು ಗೆಲ್ಲಲು ಪೈಪೋಟಿಗೆ ಬಿದ್ದಂತೆ ಸಾಗುತ್ತಿದೆ. ಚುನಾವಣೆ ಸಂದರ್ಭ ಒಂದು ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಒಂದು ಉಚಿತ ಯೋಜನೆ ಘೋಷಿಸಿದರೆ, ಮತ್ತೊಂದು ಪಕ್ಷ ಇನ್ನೆರಡು ಯೋಜನೆ ಘೋಷಿಸಿ ಬಿಡುತ್ತದೆ. ಈಗ ನಡೆಯುತ್ತಿರುವುದು ಕೂಡಾ ಅದೇ. ಚುನಾವಣೆ ಪೂರ್ವದಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ, ಆರ್ಥಿಕ ಗಾತ್ರ ಅರಿಯದೆ ಉಚಿತ ಯೋಜನೆಗಳನ್ನು ರಾಜಕೀಯ ಪಕ್ಷಗಳು ಘೋಷಿಸಿ ಬಿಟ್ಟರೆ ಮತ್ತೆ ಅದನ್ನು ಅನುಷ್ಠಾನಗೊಳಿಸಲು ಆರ್ಥಿಕತೆ ಸರಿದೂಗಿಸಲು ಸರಕಾರ ಸಾಕಷ್ಟು ಹೆಣಗಾಡಬೇಕಾಗುತ್ತದೆ…

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ನಾನಾ ಬಗೆಯ ಕಸರತ್ತು ನಡೆಸುವುದನ್ನು ಕಾಣುತ್ತೇವೆ. ಸಮುದಾಯ, ಜಾತಿ, ಧರ್ಮ ಹಾಗೂ ಸಾಮೂಹಿಕ ಮತ ಕ್ರೋಢೀಕರಣಕ್ಕೆ ಏನೆ ಸರ್ಕಸ್ ಮಾಡಬೇಕೋ ಅದನ್ನೆ ರಾಜಕೀಯ ಪPಗಳು ಮಾಡುತ್ತಲೇ ಬರುತ್ತಿವೆ. ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ಪPಗಳು ಅಭಿವೃದ್ಧಿ ಆಧಾರದಲ್ಲಿ ಮತ ಬೇಡುವುದನ್ನು ಬಿಟ್ಟು ಅನ್ಯಮಾರ್ಗಗಳತ್ತ ಮುಖ ಮಾಡಿ ಅದೆಷ್ಟೋ ವರ್ಷಗಳು ಕಳೆದಿವೆ. ಸಬ್ಸಿಡಿ, ಸಾಲ ಮನ್ನಾ, ಮೀಸಲಾತಿ ಹೀಗೆ ಅನೇಕ ರೀತಿಯ ಆಮಿಷಗಳು ಈ ಹಿಂದೆ ಚಾಲ್ತಿಯಲ್ಲಿದ್ದ ಸಂಗತಿಗಳು. ಆದರೆ, ಪ್ರಸ್ತುತ ರಾಜಕಾರಣ ಅದಕ್ಕಿಂತಲೂ ಭಿನ್ನತೆ ಹೊಂದಿದೆ.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರು ಮೂಲಭೂತ ಸೌಕರ್ಯ, ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗದ ಹೊರತಾಗಿ ಯಾವುದೇ ಉಚಿತ ಯೋಜನೆಗಳನ್ನು ಸರಕಾರಗಳು ನೀಡಬಾರದು. ಸರಕಾರಗಳು ಉಚಿತ ಯೋಜನೆಗಳನ್ನು ನೀಡಿದಲ್ಲಿ ಪ್ರಜೆಗಳು ಸೋಮಾರಿಗಳಾಗುತ್ತಾರೆ ಎಂಬ ಒಂದು ಕಾಲದ ಮಾತು ಅಕ್ಷರಶಃ ನಿಜವೆಂಬಂತಿದೆ.

ಪ್ರಸ್ತುತ ದೇಶದಲ್ಲಿ ರಾಜಕಾರಣ ಉಚಿತ ಭಾಗ್ಯಗಳ ಮೂಲಕ ಜನರ ಮನಸ್ಸನ್ನು ಗೆಲ್ಲಲು ಪೈಪೋಟಿಗೆ ಬಿದ್ದಂತೆ ಸಾಗುತ್ತಿದೆ. ಚುನಾವಣೆ ಸಂದರ್ಭ ಒಂದು ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಒಂದು ಉಚಿತ ಯೋಜನೆ ಘೋಷಿಸಿದರೆ, ಮತ್ತೊಂದು ಪಕ್ಷ ಇನ್ನೆರಡು ಉಚಿತ ಯೋಜನೆ ಘೋಷಿಸಿ ಬಿಡುತ್ತದೆ. ಈಗ ನಡೆಯುತ್ತಿರುವುದು ಕೂಡಾ ಅದೇ. ಚುನಾವಣೆ ಪೂರ್ವದಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ, ಆರ್ಥಿಕ ಗಾತ್ರ ಅರಿಯದೆ ಉಚಿತ ಯೋಜನೆಗಳನ್ನು ರಾಜಕೀಯ ಪಕ್ಷಗಳು ಘೋಷಿಸಿ ಬಿಟ್ಟರೆ ಮತ್ತೆ ಅದನ್ನು ಅನುಷ್ಠಾನಗೊಳಿಸಲು ಆರ್ಥಿಕತೆ ಸರಿದೂಗಿಸಲು ಸರಕಾರ ಸಾಕಷ್ಟು ಹೆಣಗಾಡಬೇಕಾಗುತ್ತದೆ.

ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಹರ್ಯಾಣ ಹೀಗೆ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಉಚಿತ ಯೋಜನೆಗಳೇ ಬಹಳ ಸದ್ದು ಮಾಡಿವೆ. ಕೆಲ ರಾಜ್ಯಗಳಲ್ಲಿ ಉಚಿತ ಭಾಗ್ಯಗಳು ರಾಜಕೀಯ ಪಕ್ಷಗಳ ಕೈ ಹಿಡಿದರೆ ಇನ್ನು ಕೆಲ ರಾಜ್ಯಗಳಲ್ಲಿ ಠುಸ್ಸ್ ಪಟಾಕಿಯಂತೆ ರಾಜಕೀಯ ಪPಗಳು ಮಕಾಡೆ ಮಲಗಿವೆ.

ಇನ್ನು ಕರ್ನಾಟಕದ ಕಾಂಗ್ರೆಸ್ ಸರಕಾರದ ವಿಚಾರಕ್ಕೆ ಬರುವುದಾದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪP ಘೋಷಿಸಿದ ಪಂಚ ಗ್ಯಾರಂಟಿಗಳು ಸಖತ್ ಆಗಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳನ್ನು ಗಳಿಸಲು ಸಹಕಾರಿಯಾಗಿತ್ತು. ಮಹಿಳಾ ಮತದಾರರನ್ನು ಗುರಿಯಾಗಿಸಿ ಘೋಷಿಸಿದ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆ, ಅನ್ನ ಭಾಗ್ಯ, ಯುವ ನಿಧಿ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಬಡ ಮಧ್ಯಮ ವರ್ಗದ ಜನರ ಮತ ಗಳಿಕೆಯ ಸುಲಲಿತ ಹಾದಿಯಾಗಿತ್ತೆಂದರೂ ಅತಿಶಯೋಕ್ತಿಯಾಗಲಾರದು. ಇದೇ ತಂತ್ರಗಾರಿಕೆಯನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಣೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಇದು ಲಾಭ ತಂದು ಕೊಟ್ಟಿಲ್ಲ.

ರಾಜ್ಯ ಸರಕಾರವೇನೋ ಉಚಿತ ಭಾಗ್ಯಗಳನ್ನು ಘೋಷಿಸಿ ಅದನ್ನು ಹಂತಹಂತವಾಗಿ ಅನುಷ್ಠಾನಗೊಳಿಸುವುದು ಇಲ್ಲವೇ ಕೇವಲ ಒಂದೆರಡು ಯೋಜನೆಗಳನ್ನು ಕೈಗೆತ್ತಿಕೊಂಡು ಬಾಕಿ ಉಳಿದ ಯೋಜನೆಗಳನ್ನು ಕೈ ಬಿಡುವ ಸವಾಲು ಹಾಗೂ ಒತ್ತಡಕ್ಕೆ ಸಿಲುಕಿತು. ಪಂಚ ಗ್ಯಾರಂಟಿಗಳ ಅನುಷ್ಠಾನ ಎಂಬುವುದು ಅಷ್ಟು ಸಲೀಸಾದ ಕಾರ್ಯವೇ ಅಲ್ಲ. ಒಂದರ್ಥದಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ಮುಳ್ಳಿನ ಹಾಸಿಗೆಯ ಮೇಲಿನ ನಡಿಗೆಯೇ ಸರಿ. ಇಷ್ಟೆ ಯೋಜನೆಗಳನ್ನು ಸರಿದೂಗಿಸಲು ಸರಕಾರದ ಬೊಕ್ಕಸದಲ್ಲಿ ಸಾಕಷ್ಟು ಸಂಪನ್ಮೂಲಗಳ ಕೊರತೆಯ ಮಧ್ಯೆ, ಸರಕಾರದ ಕೆಲ ಪ್ರತಿನಿಧಿಗಳ ವಿರೋಧದ ಮಧ್ಯೆ ಎ ಯೋಜನೆಯನ್ನು ಏಕಕಾಲದಲ್ಲಿ ಜಾರಿಗೆ ತರುವ ದುಸ್ಸಾಹಸಕ್ಕೆ ರಾಜ್ಯಮುಂದಾಗಿರುವುದು ಕಣ್ಣಿಗೆ ಕಾಣುವ ಸತ್ಯ.

ಸರಕಾರ ಪ್ರಸ್ತುತ ಆರ್ಥಿಕತೆ ಸರಿದೂಗಿಸಲು ಎ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಸಿದ್ದು ಸಾರ್ವಜನಿಕರು ಕಿಡಿಕಾರುವಂತಾಗಿದೆ. ಮಹಿಳೆಯರಿಗೆ ನೀಡುವ ಉಚಿತ ಯೋಜನೆಗಳನ್ನು ಪುರುಷರ ಮೂಲಕವೇ ವಸೂಲು ಮಾಡುವ ಹಾದಿಯೇ ಬೆಲೆ ಏರಿಕೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕ್ಷೇತ್ರದ ಶಾಸಕರಿಗೆ ಅಭಿವೃದ್ಧಿ ಎಂಬ ವಿಚಾರದಲ್ಲಿ ಕಿಂಚಿತ್ತೂ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪ ಶಾಸಕರ ವಲಯದಿಂದ ಕೇಳಿ ಬರುತ್ತಿದೆ ಎನ್ನಲಾಗಿದ್ದು, ಸರಕಾರ, ಜನಪ್ರತಿನಿಧಿ ಎಂಬಲ್ಲಿ ಅಭಿವೃದ್ಧಿ ಎಂಬುವುದು ಪ್ರಧಾನ ಮಾನದಂಡವಾಗಬೇಕೇ ವಿನಾ ಇನ್ಯಾವುದೋ ಗಿಮಿಕ್‌ಗಳಲ್ಲ. ಗಿಮಿಕ್‌ಗಳು ಎಂಬುದು ರಾಜಕಾರಣಕ್ಕೆ ಮಾತ್ರ ಸೀಮಿತವಾಗಬೇಕು. ಇನ್ನು ಜಪಾನ,ಇಸ್ರೇಲ್ ನಂತಹ ದೇಶಗಳಿಗೆ ಹೋಲಿಸಿದರೆ ಅಲ್ಲಿ ದಿನದ ೨೪ ಗಂಟೆ ಶ್ರಮ ಪಟ್ಟು ದುಡಿಯುವ ಜನಸಾಮಾನ್ಯರನ್ನು ಕಾಣಬಹುದು. ಆ ಕಾರಣಕ್ಕಾಗಿ ಎ ತಂತ್ರeನಗಳಿಂದ ಹಾಗೂ ಪರಿಶ್ರಮದಿಂದ ಆ ರಾಷ್ಟ್ರ ಎಷ್ಟೇ ಅವಘಡ ಸಂಭವಿಸಿದರೂ ಫಿನಿಕ್ಸ ಹಕ್ಕಿಯಂತೆ ಮತ್ತೆ ಮತ್ತೆ ಎದ್ದು ನಿಲ್ಲುತಿದೆ. ಅಲ್ಲಿನ ಪ್ರಜೆಗಳು ಯಾರೂ ಉಚಿತ ಯೋಜನೆಗಳನ್ನು ನಿರೀಕ್ಷೆ ಮಾಡುವುದಿಲ್ಲ. ಅಲ್ಲಿನ ಜನ ಚಿಂತಿಸುವ ವಿಚಾರಗಳೇ ಅಭಿವೃದ್ಧಿಯ ಕುರಿತಾದಂತವುಗಳೇ ಆಗಿದೆ.ಆದರೆ ನಮ್ಮ ಜನಸಾಮಾನ್ಯರು ದುಡಿದು ತಿನ್ನುವ ಬದಲು ಸರಕಾರದ ಕಡೆಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವುದು. ಚುನಾವಣಾ ಸಂದರ್ಭಗಳಲ್ಲಿ ಅಭ್ಯರ್ಥಿಗಳಿಗೆ ತಮ್ಮ ಮತವನ್ನು ಮಾರಿಕೊಳ್ಳುವ ಮನಸ್ಥಿತಿ ದೇಶದ ಪ್ರಗತಿ ಹಾಗೂ ಅಭಿವೃದ್ಧಿಗೆ ಮಾರಕವೆನ್ನಬಹುದು.

ಇನ್ನು ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಒಂದು ಮತಕ್ಕೆ ಹಣ,ಮದ್ಯ, ಸೀರೆ ಅಥವಾ ಮನೆಗೆ ಇಂತಿಷ್ಟು ಹಣ ಅಥವಾ ಉಡುಗೊರೆ ರೂಪದಲ್ಲಿ ಜನರಿಗೆ ಆಮಿಷವೊಡ್ಡುವುದು ಪ್ರಸ್ತುತ ರಾಜಕಾರಣದಲ್ಲಿ ಮಾಮೂಲು ಸಂಗತಿಗಳು.ಇನ್ನು ಈ ಸಂದರ್ಭ ಮತದಾರರೇ ರಾಜಕಾರಣಿಗಳ ಬಳಿ ನಿಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನಮಗೇನು ಕೊಡುತ್ತೀರಿ ಎಂದು ಪ್ರಶ್ನೆ ಮಾಡುವುದಿದೆ.ಉಚಿತ ಯೋಜನೆಗಳಿಗಾಗಿ ಮತ ಮಾರಿಕೊಳ್ಳುವ ಮಂದಿ ಇದರ ಮುಂದಿನ ದುಷ್ಪರಿಣಾಮ, ದೇಶದ ಆರ್ಥಿಕ ಮುಗ್ಗಟ್ಟು ಮುಂತಾದ ಬಾಧಕದ ಬಗೆಗಿನ ಚಿಂತೆ ಮಾಡುವುದರಲ್ಲಿ ಹಿಂದೆ ಬೀಳುತ್ತಿದ್ದಾರೆ.

ಒಂದು ಸರಕಾರ ತಂದ ಬಿಟ್ಟಿ ಯೋಜನೆಗಳಿಂದ ಖಜಾನೆ ಬರಿದಾಗಿ ಮತ್ತೊಂದು ಹೊಸ ಸರಕಾರ ಆಡಳಿತಕ್ಕೆ ಬಂದಾಗ ಇನ್ನೆರಡು ಹೊಸ ಯೋಜನೆಗಳನ್ನು ಜಾರಿ ತರಬೇಕಾದ ಸಂದಿಗ್ಧ ಪರಿಸ್ಥಿತಿಗೆ ತಲುಪುತ್ತದೆ. ಒಂದೆಡೆ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಸಾಹಸ ಮತ್ತೊಂದೆಡೆ ಆರ್ಥಿಕ ಮುಗ್ಗಟ್ಟಿನ ಒತ್ತಡ ಇವು ಆಡಳಿತಾರೂಢ ಪPವನ್ನು ಆವರಿಸಿಕೊಳ್ಳುತ್ತದೆ. ಇಂತಹ ಉಚಿತ ಯೋಜನೆಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಶೋಭೆ ತರುವ ವಿಚಾರಗಳಲ್ಲ. ರಾಜಕೀಯ ಪPಗಳು ಅಥವಾ ಸರಕಾರಗಳು ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಉದ್ಯೋಗದ ಜೊತೆಗೆ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಡೆಗೆ ವಿಶೇಷ ಕಾಳಜಿ ಮುತುವರ್ಜಿ ವಹಿಸಬೇಕು.

– ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಲೇಖಕ

Related Posts

Leave a Reply

Your email address will not be published. Required fields are marked *